ನಟನ ರಂಗಶಾಲೆಯಲ್ಲಿ ಮಕ್ಕಳ ರಂಗೋತ್ಸವ

drama 2
Published on

ಮೈಸೂರು: ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ರಾಷ್ಟ್ರೀಯ ಮಕ್ಕಳ ರಂಗೋತ್ಸವವನ್ನು ಸೆ.22ರಿಂದ ಸೆ.24ರವರೆಗೆ ಆಯೋಜಿಸಲಾಗಿದೆ.


ಪ್ರತಿದಿನ ಮಧ್ಯಾಹ್ನ 3.30 ಹಾಗೂ ಸಂಜೆ 6.30ಕ್ಕೆ ನಾಟಕಗಳು ಪ್ರದರ್ಶನಗೊಳ್ಳಲಿವೆ. 22 ರಂದು ಸಂಜೆ 6.30ಕ್ಕೆ ತರ್ಸ್ಟಿ ಕ್ರೌರಿಟರ್ನ್ಸ್, 23 ರಂದು ಮಧ್ಯಾಹ್ನ 3.30ಕ್ಕೆ ‘ಪತಂಗಲ್’, ‘ಡ್ರಾಪ್ಸ್’ ಹಾಗೂ ಸಂಜೆ 6.30ಕ್ಕೆ ‘ಲಾ ಪೊ ಲಾ ಚಿಲ್ಡ್ರೆನ್ಸ್ ಫ್ರೆಂಡ್’, ‘ನಜೀರ್ ಕಥಾ ಕೀರ್ತನ್’, 24 ರಂದು ಮಧ್ಯಾಹ್ನ 3.30ಕ್ಕೆ ‘ತೊತೋ ಚಾನ್’, ‘ಪಿಪ್ಪಿಗೊಂದು ಪಪ್ಪಿ’ ಹಾಗೂ ಸಂಜೆ 6.30ಕ್ಕೆ ‘ಹುಕರೂ’ ನಾಟಕ ಪ್ರದರ್ಶನವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net