ಮಕ್ಕಳ ಬೇಸಿಗೆ ಶಿಬಿರ ಸಂಪನ್ನ

8 vpt 1
ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಕಲಿತ ಯಕ್ಷಗಾನ ನೃತ್ಯ ಪ್ರದರ್ಶನ ನೀಡಲಾಯಿತು
Published on

ವಿರಾಜಪೇಟೆ : ವಿರಾಜಪೇಟೆಯ ಇಂಟೋಪೀಸ್ ನೃತ್ಯ ಟೀಂ ಹಾಗೂ ಟೆಕ್ವಾಂಡೊ ಟ್ರೈನಿಂಗ್ ಸೆಂಟರ್ ಮತ್ತು ಪ್ರಗತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ‘ಮಕ್ಕಳ ಬೇಸಿಗೆ ಶಿಬಿರ’ವನ್ನು ಪ್ರಗತಿ ಶಾಲೆ ಸಭಾಂಗಣದಲ್ಲಿ 26 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಗತಿ ಶಾಲಾ ವ್ಯವಸ್ಥಾಪಕ ಹಾಗೂ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಬೇಸಿಗೆ ರಜಾ ದಿನಗಳಲ್ಲಿ ಮನೆಯಲ್ಲಿ ಮೊಬೈಲ್, ಟಿವಿ ಮುಂದೆ ಕುಳಿತು ಕೊಳ್ಳದೆ ಶಿಬಿರಗಳಲ್ಲಿ ಭಾಗವಹಿಸಿ ನೃತ್ಯ, ಕ್ರೀಡೆ, ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಯೋಗ, ನೃತ್ಯ, ನಾಟಕ, ಸಂಗೀತ, ಕರಕುಶಲ, ಜಿಮ್ನಾಸ್ಟಿಕ್ಸ್, ಚಿತ್ರಕಲೆ, ಟೆಕ್ವಾಂಡೊ ಪ್ರದರ್ಶನ ಇತರ ಚಟುವಟಿಕೆ ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ಸಾಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸುಮೂರು 75ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಶಿಬಿರದಲ್ಲಿ ಅತಿಥಿಗಳಾಗಿ ಕಾವೇರಿ ಶಾಲೆಯ ಕಾರ್ಯದರ್ಶಿ ವಿನೋದ್, ಪ್ರಗತಿ ಶಾಲೆಯ ನಿರ್ವಾಹಕಿ ಸುಷ್ಮಾ ತಿಮ್ಮಯ್ಯ, ಚಿತ್ರಕಲಾ ಶಿಕ್ಷಕರಾದ ಕ್ಲಿಪರ್ಡ್ ಡಿಮೆಲ್ಲೂ, ಭಾನುಮತಿ ರಾಜನ್, ಕಾರ್ಯಕ್ರಮ ಆಯೋಜಕ ಇಂಟೋಪೀಸ್ ಟೀಂನ ವಿಷ್ಣು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net