ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ಅಗತ್ಯ

8SND-01
ಸಿಂಧನೂರು ತಾಲೂಕಿನ ರಾಗಲಪರ್ವಿಯಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಗಾರವನ್ನು ಸಿಡಿಪಿಒ ಲಿಂಗನಗೌಡ ಉದ್ಘಾಟಿಸಿದರು. ವಲಯದ ಮೇಲ್ವಿಚಾರಕಿ ವಿದ್ಯಾವತಿ, ಸಂಪನ್ಮೂಲ ವ್ಯಕ್ತಿ ಮೇಲ್ವಿಚಾರಕಿ ಸವಿತಾ ಸಜ್ಜನ್ ಇದ್ದರು.
Published on

ಸಿಂಧನೂರು: ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳಿಗೂ ಸಾಮಾನ್ಯ ಜ್ಞಾನ ನೀಡುವ ಮೂಲಕ ಶಾಲಾ ಪೂರ್ವ ಶಿಕ್ಷಣ ಬಲವರ್ಧತೆಗೊಳಿಸುವಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆಂದು ಸಿಡಿಪಿಒ ಲಿಂಗನಗೌಡ ಹೇಳಿದರು.

ತಾಲೂಕಿನ ರಾಗಲಪರ್ವಿ ವಲಯದ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಐದನೆಯ ಹಂತದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಗಾರದಲ್ಲಿ ಶನಿವಾರ ಮಾತನಾಡಿದರು.

ಮಕ್ಕಳು ಬೌದ್ಧಿಕವಾಗಿ ಆರು ವರ್ಷದೊಳಗೆ ಬೆಳಯುತ್ತಾರೆ. ಅದಕ್ಕೆ ಶಾಲಾಪೂರ್ವ ಶಿಕ್ಷಣ ಅತಿ ಅವಶ್ಯಕವಾಗಿದ್ದು ಅಂಗನವಾಡಿ ಕೇಂದ್ರಗಳಲ್ಲಿ ಪಠ್ಯಕ್ರಮವನ್ನ ನಿಗದಿಪಡಿಸಿ ಶಾಲಾ ಪೂರ್ವ ಶಿಕ್ಷಣವನ್ನ ನೀಡಲಾಗುತ್ತಿದ್ದು, ಅದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯನ್ನು ಪಡೆಯುವುದು ಅವಶ್ಯಕವಾಗಿದೆಂದರು.

ವಲಯದ ಮೇಲ್ವಿಚಾರಕಿ ವಿದ್ಯಾವತಿ, ಸಂಪನ್ಮೂಲ ವ್ಯಕ್ತಿ ಮೇಲ್ವಿಚಾರಕಿ ಸವಿತಾ ಸಜ್ಜನ್, ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net