ಇಳಕಲ್ಲದಲ್ಲಿ ಶೀಘ್ರ ಮಕ್ಕಳ ಸಾಹಿತ್ಯ ಭವನ ನಿರ್ಮಾಣ

ilk
ಇಳಕಲ್ಲದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ನೂತನ ಘಟಕವನ್ನು ಶಾಸಕ ವಿಜಯಾನಂದ ಕಾಶಪ್ಪನವರ, ಗುರುಮಹಾಂತ ಶ್ರೀಗಳು ಉದ್ಘಾಟಿಸಿದರು. ಎಸ್. ಅರುಂಧತಿ, ರಾಮನಗೌಡ ಆರ್. ಸಂದಿಮನಿ ಇತರರಿದ್ದರು.
Published on

ಇಲಕಲ್ಲ: ಮಕ್ಕಳಲ್ಲಿ ಹುದುಗಿರುವ ವಿಶೇಷ ಕಲೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಕ್ಕಳ ಸಾಹಿತ್ಯ ಪರಿಷತ್ ಘಟಕ ಮಾಡಲಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಠದ ದಾಸೋಹ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಳಕಲ್ಲ ತಾಲೂಕು ನೂತನ ಮಕ್ಕಳ ಸಾಹಿತ್ಯ ಘಟಕದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಮಕ್ಕಳು ನವ ಭಾರತ ನಿರ್ಮಿಸುವ ಶಕ್ತಿಗಳಾಗಿದ್ದಾರೆ. ಶೀಘ್ರದಲ್ಲೇ ಪಟ್ಟಣದಲ್ಲಿ ಮಕ್ಕಳ ಸಾಹಿತ್ಯ ಭವನ ನಿರ್ಮಿಸಲಾಗುವುದೆಂದು ತಿಳಿಸಿದರು.
ಚಿತ್ತರಗಿ ಇಳಕಲ್ಲ ಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮಸಾಪ ತಾಲೂಕು ಘಟಕದ ಅಧ್ಯಕ್ಷೆ ಎಂ. ಅರುಂಧತಿ ಅಧ್ಯಕ್ಷತೆ ವಹಿಸಿದ್ದರು.

ರಾಮನಗೌಡ ಆರ್. ಸಂದಿಮನಿ ವಿಶೇಷ ಉಪನ್ಯಾಸ ನೀಡಿದರು. ಡಿಡಿಪಿಐ ಬಿ.ಕೆ. ನಂದನೂರ, ನಿವೃತ್ತ ಮುಖ್ಯಶಿಕ್ಷಕಿ ಶಕುಂತಲಾ ಕಮತಗಿ, ಸಹ ಶಿಕ್ಷಕಿ ಮಂಜುಳಾ ಬಸನಾಳ, ಸಮಾಜ ಸೇವಕಿ ಬಸಮ್ಮ ಪಟ್ಟಣಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ್, ಆರ್. ಎಂ. ಮಾಸರೆಡ್ಡಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ಗೌಡರ್. ಎನ್. ಎಸ್. ಸಜ್ಜನ್, ಉಪಾಧ್ಯಕ್ಷ ಎಂ. ಎಸ್. ಬಸವನಾಳ, ಸಂಗಮೇಶ ರೇಷ್ಮೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net