ಕೆಪಿಎಸ್‌ನಲ್ಲಿ ಮಕ್ಕಳ ಸಂಸತ್ ಚುನಾವಣೆ

07-kkr-1(7-25
ಕಿಕ್ಕೇರಿ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಮಕ್ಕಳ ಸಂಸತ್ ಚುನಾವಣೆ ನಡೆಯಿತು. ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
Published on

ಕಿಕ್ಕೇರಿ: ಮಕ್ಕಳು ನಾಡಿನ ಭವಿಷ್ಯದ ಸಂಪತ್ತಾಗಿದ್ದು ಮಕ್ಕಳಲ್ಲಿ ಮತದಾನದ ಅರಿವು, ನಾಯಕತ್ವ ಗುಣ, ಆಮಿಷಕ್ಕೆ ಒಳಗಾಗಿ ಮತವನ್ನು ಮಾರಿಕೊಳ್ಳದಿರಲು ಮಕ್ಕಳಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ಜರುಗಿದ ಮಕ್ಕಳ ಸಂಸತ್ ಚುನಾವಣೆಯಲ್ಲಿ ಮಕ್ಕಳು ಸಂಭ್ರಮದಿಂದ ಭಾಗವಹಿಸಿದ್ದರು. 8 ರಿಂದ 10ನೇ ತರಗತಿಯ ಮಕ್ಕಳು ಮತದಾನ ಮಾಡಲು ಆಧಾರ್ ಕಾರ್ಡು ಹಿಡಿದುಕೊಂಡು ಸರತಿಯಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಕೆಪಿಎಸ್ ಪ್ರಜ್ವಲ್ ಹಾಗೂ ಕೆಪಿಎಸ್ ಉಜ್ವಲ್ ಪಕ್ಷಗಳಾಗಿ ಎರಡು ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಎರಡು ಪಕ್ಷಗಳಲ್ಲಿ 18 ಅಭ್ಯರ್ಥಿಗಳಾಗಿ ಒಟ್ಟು 36 ಮಕ್ಕಳು ಚುನಾವಣೆ ಕಣದಲ್ಲಿದ್ದರು. ಪ್ರತಿಪಕ್ಷದಲ್ಲಿಯೂ ಅಧ್ಯಕ್ಷರನ್ನು ನೇಮಿಸಿಕೊಂಡು ಅಧ್ಯಕ್ಷರ ನೇತೃತ್ವದಲ್ಲಿ ಬಿರುಸಿನಿಂದ ಮತಪ್ರಚಾರ ಮಾಡಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಗಾಗಿ ಪ್ರಕಟಣೆ, ಕರಪತ್ರ, ಮತದಾನದ ಬ್ಯಾಲೆಟ್ ಪೇಪರ್, ಮತದಾರರ ಪಟ್ಟಿ, ಮತದಾನ ಮಾಡಿದ ಗುರುತಿಗೆ ಬೆರಳಿಗೆ ಶಾಯಿ ಹಾಕುವುದು. ಚುನಾವಣಾ ಮತಗಟ್ಟೆ, ಮತದಾನ ಹಾಕಲು ಮತಪೆಟ್ಟಿಗೆಯನ್ನು ಸುಂದರವಾಗಿ ನಿರ್ಮಿಸಿದ್ದರು.

ರಾಜಕಾರಣಿಗಳಂತೆ ಮಕ್ಕಳು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮಾತಿನ ಚಟಾಕಿ ಹಾರಿಸಿದರು. ತಮ್ಮ ಆಭ್ಯರ್ಥಿ ಗೆಲ್ಲಿಸಿ ತಮ್ಮ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಗೆಲವಿಗಾಗಿ ಚುನಾವಣೆ ಪ್ರಣಾಳಿಕೆ ತಯಾರಿಸಿಕೊಂಡು ಭರವಸೆ ನೀಡಿದರು.

ಕೆಪಿಎಸ್ ಪ್ರಜ್ವಲ್ ಪಕ್ಷದ ಅಧ್ಯಕ್ಷರಾಗಿದ್ದ ಗಗನ್ ನಾಯಕತ್ವದಲ್ಲಿ 12 ಅಭ್ಯರ್ಥಿಗಳು ಬಹುಮತ ಪಡೆದು ಸರ್ಕಾರ ರಚನೆ ಮಾಡಿದರು. ಕೆಪಿಎಸ್ ಉಜ್ವಲ್ ಪಕ್ಷದ ಅಧ್ಯಕ್ಷ ಜೀವನ್ ನಾಯಕತ್ವದಲ್ಲಿ 6 ಅಭ್ಯರ್ಥಿಗಳು ವಿಜೇತರಾದರು. ಬಹುಮತ ಪಡೆದ ವಿಜೇತ ಕೆಪಿಎಸ್ ಪ್ರಜ್ವಲ್ ಪಕ್ಷ ಮುಖ್ಯಮಂತ್ರಿ, ಸಚಿವ ಸಂಪುಟ ರಚಿಸಿಕೊಂಡು ಮಂತ್ರಿಮಂಡಲ ರಚನೆ ಮಾಡಿಕೊಂಡರು.

ಎರಡು ಪಕ್ಷಗಳ ಸಲಹೆಗಾರರಾಗಿ ಶಿಕ್ಷಕರಾದ ಬಿ.ಎನ್. ಪರಶಿವಮೂರ್ತಿ, ನಂದಿನಿ, ಎಂ.ಎಚ್. ಕೃಷ್ಣಪ್ಪ, ದೀಪಕ್ ಪಟೇಲ್ ಕಾರ್ಯನಿರ್ವಹಿಸಿದರು. ಚುನಾವಣಾಧಿಕಾರಿಯಾಗಿ ಎಸ್.ಎಂ.ಬಸವರಾಜು, ಗಿರೀಶ್, ಸುರೇಶ್, ಮೊಹಮ್ಮದ್ ರಿಜ್ವಿ, ಶ್ರೀಕಾಂತ್ ಚಿಮ್ಮಲ್, ಹೆಗಡೆ, ರಮ್ಯಾ, ರಾಗಿಣಿ, ವಿಶಾಲಾಕ್ಷಿ, ಅಶ್ವಿನಿ, ಚುನಾವಣಾ ವೀಕ್ಷಕರಾಗಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಶೇಖರ್, ದಿನೇಶ್‌ಬಾಬು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net