ವ್ಯಕ್ತಿತ್ವ ನಿರ್ಮಾಣಕ್ಕೆ ಮಕ್ಕಳ ಸಾಹಿತ್ಯ ಪೂರಕ

21 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳ ಸಾಹಿತ್ಯದ ಬೇರುಗಳು ಜಾನಪದ ಸಾಹಿತ್ಯದಲ್ಲಿದ್ದು, ಅದು ಮಾನವ ಸಾಹಿತ್ಯದ ಬುನಾದಿ ಎಂದು ಶಿಕ ಶ್ರೀಧರ ಗಸ್ತಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಕವಿ ಬಿ. ಕೆ. ಹೊಂಗಲ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಮಕ್ಕಳ ಶ್ರೇಷ್ಠ ಕವಿ&2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಮಕ್ಕಳ ಸಾಹಿತ್ಯವು ಮಕ್ಕಳ ಮನಸ್ಸನ್ನು ಅರಳಿಸಿ ಅವರ ಭಾವನೆಗಳಿಗೆ ಸ್ಫೂತಿರ್ ನೀಡುವಂತಿರಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಕ್ಕಳ ಸಾಹಿತ್ಯ ಪೂರಕವಾಗಿದೆ. ಮಕ್ಕಳು ಸಾಹಿತ್ಯ ಓದುವುದರಿಂದ ಅವರಲ್ಲಿ ಒಳ್ಳೆ ಜೀವನ ಮೌಲ್ಯ, ಸಂಸ್ಕಾರ ರೂಪಗೊಳ್ಳುವವು. ವಿವೇಕ, ಒಳ್ಳೆ ಆಲೋಚನೆಗಳನ್ನು ಬೆಳೆಸುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.
ಡಾ. ರುದ್ರಣ್ಣ ಚಿಲುಮಿ ಮಾತನಾಡಿದರು. ಡಾ. ಬಸವರಾಜ ದೇವರು ಆಶೀರ್ವಚನ ನೀಡಿದರು. ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅವರಿಗೆ ಶ್ರೇಷ್ಠ ಮಕ್ಕಳ ಸಾಹಿತಿ&2024 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಅಧ್ಯತೆ ವಹಿಸಿದ್ದರು.
ಬಿ. ಕೆ. ಹೊಂಗಲ, ಸೋಮನಾಥ ಹೊಂಗಲ, ಡಾ. ಮಾರ್ಕಂಡೇಯ ದೊಡಮನಿ, ಸತೀಶ ತುರಮರಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಎನ್​.ಎಸ್​. ಯತ್ನಳ್ಳಿ, ಬಿ.ಐ. ಈಳಿಗೇರ, ಎಸ್​.ಜಿ. ಪಾಟೀಲ, ಕೆ.ಎಚ್​.ನಾಯಕ, ಎಂ.ಎಂ. ಚಿಕ್ಕಮಠ, ಎಂ.ಎಸ್​. ನರೇಗಲ್ಲ, ಸಿದ್ದರಾಮ ಹಿಪ್ಪರಗಿ, ಚನಬಸಪ್ಪ ಅವರಾದಿ, ಎಂ. ಬಿ. ಹೆಗ್ಗೇರಿ, ಹೊಂಗಲ ಕುಟುಂಬಸ್ಥರು, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net