ಮಕ್ಕಳ ಸಾಹಿತ್ಯ ರಚನೆ ಇಂದಿನ ಅಗತ್ಯ

Children's literature creation is a necessity today
ರಬಕವಿಯ ದಾನಮ್ಮದೇವಿ ಸಮುದಾಯ ಭವನದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ‘ಮಕ್ಕಳೇ ಬಂಗಾರ’ ಕೃತಿ ಬಿಡುಗಡೆಗೊಳಿಸಿದರು. ಸಾಹಿತಿಗಳಾದ ಬಿ.ಆರ್. ಪೊಲೀಸಪಾಟೀಲ, ಎಂ. ಎಸ್. ಬದಾಮಿ, ಮ.ಕೃ. ಮೇಗಾಡಿ, ಶೀವಜಾತ ಉಮದಿ ಇದ್ದರು.
Published on

ರಬಕವಿ/ಬನಹಟ್ಟಿ: ಮಕ್ಕಳ ಸಾಹಿತ್ಯ ರಚಿಸುವ ಕಾರ್ಯ ಅನನ್ಯವಾದುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

ರಬಕವಿಯ ದಾನಮ್ಮ ದೇವಿ ದೇವಸ್ಥಾನದ ಸಭಾ ಭವನದಲ್ಲಿ ಕಸಾಪ, ನಿವೃತ್ತ ನೌಕರರ ಸಂಘ, ದೇವಸ್ಥಾನ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಶಿಶುಪ್ರಾಸಗಳ ಚೌಪದಿ ಸಂಕಲನ, ಮಕ್ಕಳೇ ಬಂಗಾರ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಹಾಲಿಂಗಪುರದ ಅಣ್ಣಾಜಿ ಡತಾರೆ ಮಕ್ಕಳಲ್ಲಿ ಮೌಲ್ಯ ಬಿತ್ತುವ ಕವಿತೆಗಳನ್ನು ರಚಿಸಲು ಶ್ರಮಿಸಿದ್ದಾರೆ. ಭಾರತೀಯ ಸಂಪ್ರದಾಯ ಒತ್ತಿ ಹೇಳುವ ಮತ್ತು ಪೂರ್ವಜರು ನಡೆದು ಬಂದ ದಾರಿ, ಗ್ರಾಮೀಣ ಜೀವನ ಶೈಲಿ ಹೇಗಿತ್ತು ಎಂಬುದರ ಕುರಿತು ಮಕ್ಕಳ ಸಾಹಿತ್ಯದ ಮೂಲಕ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಹಿರಿಯ ಸಾಹಿತಿ ಬಿ.ಆರ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಬೀಜ ಬಿತ್ತಿದರೆ ಅದು ಬೆಳೆದು ಹೆಮ್ಮರವಾಗಲು ಬಹಳ ಸಮಯ ಬೇಕಾಗುವುದಿಲ್ಲ ಎಂದರು.

ಮಕ್ಕಳ ಸಾಹಿತಿ ಅಣ್ಣಾಜಿ ಡತಾರೆ ಮಾತನಾಡಿ, ಮಕ್ಕಳಾಗಿ ಮಕ್ಕಳ ಸಾಹಿತ್ಯ ರಚಿಸಬೇಕು. ಮನರಂಜಿಸುವ, ಶಿಕ್ಷಕರು, ಯುವ ಬರಹಗಾರರು ಮಕ್ಕಳು ಹಾಡಲು ಬರುವಂತಹ ಶಿಶು ಗೀತೆಗಳನ್ನು ರಚಿಸಬೇಕೆಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿ, ಏ.13ರಂದು ಬನಹಟ್ಟಿಯಲ್ಲಿ 40ನೇ ಪುಸ್ತಕಾವಲೋಕನ ಕಾರ್ಯಕ್ರಮ ನೆರವೇರಲಿದೆ. ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ ಕಾರ್ಯ ನಡೆದಿದೆ. ನಾಡು ನುಡಿ ತೇರನ್ನು ಎಲ್ಲರೂ ಕೂಡಿ ಎಳೆಯೋಣ ಎಂದರು.

ಹಿರಿಯ ಸಾಹಿತಿ ಜಿ.ಎಸ್. ವಡಗಾವಿ ಮಾತನಾಡಿದರು.

ಹಿರಿಯ ಸಾಹಿತಿಗಳಾದ ಶಿವಾನಂದ ದಾಶಾಳ, ಎಂ.ಎಸ್. ಬದಾಮಿ, ಶಿವಾನಂದ ಬಾಗಲಕೋಟಮಠ, ದಾಕ್ಷಾಯಣಿ ಮಂಡಿ, ಕಸಾಪ ಮಹಾಲಿಂಗಪುರ ವಲಯ ಅಧ್ಯಕ್ಷ ಬಸವರಾಜ ಮೇಟಿ, ತೇರದಾಳ ವಲಯ ಅಧ್ಯಕ್ಷ ಗಂಗಾಧರ ಮೋಪಗಾರ, ಶಿವಜಾತ ಉಮದಿ, ಉದ್ದಿಮೆಗಾರ್ತಿ ವಾಣಿಶ್ರೀ ಹೂಲಿ, ದಾನಪ್ಪ ಆಸಂಗಿ, ಮಹಾಶಾಂತ ಶೆಟ್ಟಿ, ಮಲ್ಲೇಶಪ್ಪ ಕುಚನೂರ, ಡಾ.ರವಿ ಜಮಖಂಡಿ, ಡಾ. ಜಿ.ಎಚ್. ಚಿತ್ತರಗಿ, ದಾನಪ್ಪ ಆಸಂಗಿ, ಮಹೇಶ ಮನ್ನಯ್ಯನವರಮಠ, ಬಸವರಾಜ ಬಾಳಿಕಾಯಿ, ಬಿ.ಎಂ. ಮಾಳೇದ, ಮಾಲಾ ಬಾವಲತ್ತಿ, ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ, ದಾನಪ್ಪ ಆಸಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net