

ಕುಂದಾಪುರ: ವಿಶೇಷ ಮಕ್ಕಳ ನಗುವಿನಲ್ಲಿ ನಮ್ಮ ನೋವು ಮರೆಸುವ ಶಕ್ತಿ ಇದೆ. ಇಂತಹ ಮಕ್ಕಳ ಸೇವೆಯಲ್ಲಿ ಸಾರ್ಥಕತೆ ಇದೆ. ಆದ್ದರಿಂದ ನಾವೆಲ್ಲರೂ ವಿಶೇಷ ಮಕ್ಕಳ ನಗುವಿಗೆ ಕಾರಣವಾಗಬೇಕು ಎಂದು ಮೈಸೂರು ಶಾಮಣ್ಣ ರಮೇಶ್ ಹೇಳಿದರು.
ತಲ್ಲೂರು ್ಯಾಮಿಲಿ ಟ್ರಸ್ಟ್ ನಡೆಸುತ್ತಿರುವ ತಲ್ಲೂರಿನ ನಾರಾಯಣ ವಿಶೇಷ ಶಾಲೆಯಲ್ಲಿ ದಾನಿ ಮೈಸೂರು ಶಾಮಣ್ಣ ರಮೇಶ್ ನಿರ್ಮಿಸಿಕೊಟ್ಟಿರುವ ಭೋಜನ ಶಾಲೆ, ವಿಸ್ತರಿತ ಅಡುಗೆ ಕೊಠಡಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ತಲ್ಲೂರು ಗ್ರಾಪಂ ಅಧ್ಯಕ್ಷ ಗಿರೀಶ್ ನಾಯ್ಕ ದಾನಿಗಳ ಕೊಡುಗೆ ಪ್ರಶಂಸಿಸಿ ಶುಭ ಹಾರೈಸಿದರು. ತಲ್ಲೂರು ್ಯಾಮಿಲಿ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು, ತಲ್ಲೂರು ಗ್ರಾಪಂ ಸದಸ್ಯೆ ಜುಡಿತ್ ಮೆಂಡೋನ್ಸಾ, ತಲ್ಲೂರು ್ಯಾಮಿಲಿ ಟ್ರಸ್ಟ್ ಸದಸ್ಯರು, ಶಾಲಾ ಹಿತೈಷಿಗಳು, ಸ್ಥಳೀಯರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹ ಶಿಕ್ಷಕಿಯರಾದ ಪ್ರತಿಮಾ ಸ್ವಾಗತಿಸಿದರು. ಶೃತಿ ವಂದಿಸಿದರು. ಮುಖ್ಯ ಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರ್ವಹಿಸಿದರು.