ಮಕ್ಕಳ ಜ್ಞಾನ ವೃದ್ಧಿಸುವ ಸೇತುವೆ

gurgunta kalika habba
ಗುರುಗುಂಟಾ ಸರ್ಕಾರಿ ಹಿಪ್ರಾ ಕನ್ಯಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಅಕ್ಕಮಹಾದೇವಿ ಉದ್ಘಾಟಿಸಿದರು. ಪ್ರಮುಖರಾದ ಚಂದ್ರಶೇಖರ ಬಡಿಗೇರ್, ಕಾಳಪ್ಪ, ನಾಗೇಶ್, ವಿಜಯಕುಮಾರ ನಾಯಕ ಇದ್ದರು.
Published on

ಗುರುಗುಂಟಾ: ಮಕ್ಕಳ ಕೌಶಲ, ಪ್ರತಿಭೆ ಪ್ರದರ್ಶನಕ್ಕೆ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅಕ್ಕಮಹಾದೇವಿ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿವೆ. ದಾಖಲಾತಿ ಪ್ರಮಾಣ ಸುಧಾರಿಸುವುದರೊಂದಿಗೆ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹಾಗೂ ಜ್ಞಾನ ವೃದ್ಧಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಸರ್ಕಾರಿ ಕನ್ಯಾ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಅಶೋಕ, ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಬಡಿಗೇರ್, ಸರ್ಕಾರಿ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ನಾಗೇಶ ಮಾತನಾಡಿದರು. 1 ರಿಂದ 5 ನೇ ತರಗತಿಯ 12 ಶಾಲೆಗಳ ಒಟ್ಟು 120 ಮಕ್ಕಳು ಪಾಲ್ಗೊಂಡಿದ್ದರು. ಎಸ್ಡಿಎಂಸಿ ಅಧ್ಯಕ್ಷ ವಿಜಯಕುಮಾರ ನಾಯಕ, ಪ್ರಮುಖರಾದ ವೀರೇಶ ಶಿರಸಂಗಿ, ಶಾಂತೇಶ ವಗ್ಗರ್, ಆನಂದ ತುರ್ವಿಹಾಳ್, ಮುಖ್ಯಶಿಕ್ಷಕ ಸಿದ್ರಾಮಪ್ಪ, ಶಿಕ್ಷಕರಾದ ರಾಘವೇಂದ್ರ ಕಪ್ಸೆ, ಕೃಷ್ಣಪ್ಪ, ಕಾಳಪ್ಪ, ಅಮರೇಶ ಇತರರಿದ್ದರು. ಶಿಕ್ಷಕ ವೀರೇಶ ಪ್ರಾರ್ಥಿಸಿದರು. ವಿಶ್ವರಾಜ ಸ್ವಾಗತಿಸಿದರು. ಲಕ್ಷ್ಮಣ ಗೌಡೂರು ನಿರ್ವಹಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net