

ಅರಕಲಗೂಡು: ತಾಲೂಕಿನ ಸಿದ್ದಾಪುರ ಗೇಟ್ ಮೈದಾನದಲ್ಲಿ ಶನಿವಾರ ಕೊಣನೂರು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಶಾಸಕ ಎ. ಮಂಜು ಚಾಲನೆ ನೀಡಿ ಮಾತನಾಡಿ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು ಓದಿನೊಂದಿಗೆ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕೆಸವತ್ತೂರು ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಕ್ರೀಡೆಗಳಲ್ಲಿ ಹಿಂದೆ ಹೆಚ್ಚಿನ ಮಕ್ಕಳು ಭಾಗವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡಾಸಕ್ತಿ ಕ್ಷೀಣಿಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಮಕ್ಕಳಲ್ಲಿ ಆಸಕ್ತಿ ಕೊರೆತೆ ಇಲ್ಲವೇ ಶಿಕ್ಷಕರ ಪ್ರೇರೇಪಣೆ ಕೊರತೆ ಎನ್ನುವ ಗೊಂದಲವಿದೆ. ಮಕ್ಕಳನ್ನು ಆದಷ್ಟು ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕಾಗಿದೆ ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ನಿಂಗಯ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಸಂಜೀವ್ ಕುಮಾರ್, ನಾಗರಾಜು, ಮುಖಂಡರಾದ ಚೌಡೇಗೌಡ, ಮಂಜೇಗೌಡ ಇತರರು ಇದ್ದರು.