ಪರಿಸರ ಗೀತೆ ಸ್ಪರ್ಧೆಯಲ್ಲಿ ಬಾಲ ಬಳಗ ಪ್ರಥಮ

18 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹು-ಧಾ ನಾಗರಿಕ ಪರಿಸರ ಸಮಿತಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್​ ಹಾಗೂ ಎಸ್​ಡಿಎಂ ನಾರಾಯಣ ಹೃದಯಾಲಯ ವತಿಯಿಂದ ಪರಿಸರ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಚುಸಾಪ ತಾಲೂಕು ಸಮ್ಮೇಳನದಲ್ಲಿ ಮಹಿಳೆಯರಿಗೆ ನಡೆದ "ಪರಿಸರ ಗೀತೆಗಳ' ಸ್ಪರ್ಧೆಯಲ್ಲಿ ಧಾರವಾಡದ "ಬಾಲ ಬಳಗ' ತಂಡ ಮೊದಲ ಬಹುಮಾನ ಪಡೆದಿದೆ.
ಹುಬ್ಬಳ್ಳಿಯ "ಮಂದಹಾಸ' ತಂಡ ದ್ವೀತಿಯ, "ಆಂಜನೇಯ' ಮಹಿಳಾ ಮಂಡಳಿ ತೃತೀಯ ಸ್ಥಾನ ಪಡೆದರೆ, ಧಾರವಾಡದ "ಶಾರದಾ' ಭಜನಾ ಮಂಡಳ ಹಾಗೂ "ಸಿದ್ದಿವಿನಾಯಕ' ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಪಡೆದಿವೆ. ವಿಜೇತರಿಗೆ ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ, ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಿದರು.
ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಕಾರ್ಯದಶಿರ್ ಡಾ. ವಿಲಾಸ ಕುಲಕರ್ಣಿ, ಪ್ರಸಾರಾಂಗ ಸಂಚಾಲಕ ಚನ್ನಬಸಪ್ಪ ಧಾರವಾಡಶೆಟ್ರು, ಕೆ.ಎಚ್​.ನಾಯಕ, ಜಯಶ್ರೀ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net