

ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇಲ್ಲ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಅಭಿಪ್ರಾಯ ಪಟ್ಟರು.
ಇದನ್ನೂ ಓದಿ: ಅಸಂಘಟಿತ ವರ್ಗ ಸರ್ಕಾರಿ ಸೌಲಭ್ಯ ಪಡೆಯಿರಿ
ತಾಲೂಕಿನ ತಂಬ್ರಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಹಾಗೂ ನೂತನವಾಗಿ ನಿರ್ಮಿಸಿದ ಅಡುಗೆ ಕೋಣೆ ಮತ್ತು ಊಟದ ಹಾಲ್ ಉದ್ಘಾಟಿಸಿ, ಮಾತನಾಡಿದರು.
ಶಾಲೆಗಳಿಗೆ ಅಡುಗೆ ಕೋಣೆ, ಊಟದ ಕೋಣೆ, ಕಾಂಪೌಂಡ್, ಶೌಚಗೃಹ, ಕುಡಿಯುವ ನೀರು ಹಾಗೂ ಶಾಲಾ ಪರಿಕರಗಳು ಸೇರಿ ಯಾವುದೇ ಸೌಲಭ್ಯಗಳು ಕೊರತೆಯಾಗದಂತೆ ಅನುದಾನ ಒದಗಿಸಲಾಗುತ್ತದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಕಳೆದ 2 ವರ್ಷಗಳ ಅವಧಿಯಲ್ಲಿ, ಸೌಕರ್ಯಗಳಿಗೆ ಸುಮಾರು 40 ಕೋಟಿ ರೂ. ಅನುದಾನ ನೀಡಲಾಗಿದೆ.
ಸರ್ಕಾರಿ ಶಾಲೆಗಳು ಬಡವರ ಪಾಲಿನ ವಿದ್ಯಾದೇಗುಲ, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ, ಉನ್ನತ ಶಿಕ್ಷಣಪಡೆದು, ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95 ಅಂಕ ಪಡೆ ರಂಜಿತ್‌ನನ್ನು ಸನ್ಮಾನಿಸಲಾಯಿತು. ತಂದೆ-ತಾಯಿ ಇಲ್ಲದ ರಂಜಿತ್ ಅವರ ಮುಂದಿನ ಶಿಕ್ಷಣಕ್ಕೆ ಉತ್ತಮ ಕಾಲೇಜು ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದರು.
ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ, ಹನುಮೇಶ, ಉಪಾಧ್ಯಕ್ಷ ಎಂ.ಎಂ.ಮಂಜುನಾಥ, ಸದಸ್ಯರಾದ ಬಣಕಾರ ಬಸಮ್ಮ, ಸಂಡೂರು ಮಹೆಬಾಬ್‌ಸಾಬ್, ಮೇಗಳಮನಿ ರುದ್ರಮ್ಮ, ಸಿ.ಪ್ರತಿಭಾ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿದ್ದರಾಜು, ಪ್ರಮುಖರಾದ ಬಣಕಾರ ಕೊಟ್ರೇಶಪ್ಪ, ಚಿತ್ತವಾಡ್ಗಿ ಪ್ರಕಾಶ, ಸೊಬಟಿ ಹರೀಶ, ಆನೇಕಲ್ ಶಾಂತಪ್ಪ, ಅಕ್ಕಿ ಕೊಟ್ರಬಸಪ್ಪ ಇತರರಿದ್ದರು.