ಮಕ್ಕಳ ಭವಿಷ್ಯ ರೂಪಿಸುವ ರೂವಾರಿಗಳು ಶಿಕ್ಷಕರು

1 gvt 02
ಗಂಗಾವತಿ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟಗಳಲ್ಲಿ ಶಿಕ್ಷಕರು ಭಾಗವಹಿಸಿದ್ದರು.
Published on

ಗಂಗಾವತಿ: ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರಿಗಾಗಿ ವಿವಿಧ ಆಟೋಟಗಳನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಪಾಠ, ಪ್ರಾಜೆಕ್ಟ್‌ಗಳಲ್ಲಿ ಮಗ್ನರಾಗುತ್ತಿದ್ದ ಶಿಕ್ಷಕರನ್ನು ಮೈದಾನಕ್ಕೆ ಆಹ್ವಾನಿಸಿದ್ದು, ದಿನವಿಡಿ ವಿವಿಧ ಆಟೋಟಗಳನ್ನು ಆಯೋಜಿಸಲಾಗಿತ್ತು. ಬ್ಲೋಯಿಂಗ್ ಬಾಲ್, ಗ್ಲಾಸ್‌ಗಳಿಂದ ಪಿರಾಮಿಡ್ ನಿರ್ಮಾಣ, ಥ್ರೋಬಾಲ್ ಸೇರಿ ಮನರಂಜನೆ ಆಟಗಳಿಗೆ ಆದ್ಯತೆ ನೀಡಲಾಗಿತ್ತು.

ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ರೂವಾರಿಗಳು ಶಿಕ್ಷಕರಾಗಿದ್ದಾರೆ. ಈ ಶಿಕ್ಷಕರಿಗಾಗಿ ವಿವಿಧ ಆಟೋಟ ಆಯೋಜಿಸಿದ್ದು, ಶಿಕ್ಷಕರ ದಿನದಂದು ಬಹುಮಾನ ವಿತರಿಸಲಾಗುವುದು.

ಎಲ್ಲ ಶಿಕ್ಷಕರು ಲವಲವಿಕೆಯಿಂದ ಭಾಗವಹಿಸಿದ್ದು, ಅಟೋಟಗಳಿಗೆ ವಿದ್ಯಾರ್ಥಿಗಳು ನೆರವಾದರು ಎಂದರು. ಶಿಕ್ಷಕರಾದ ನೀಲಕಂಠ ಅರಹುಣಸಿ, ವೇಣುಗೋಪಾಲ,ವಾಣಿ, ಸುಮಾ ಆಲ್ಲಂಪಲ್ಲಿ, ಸೋಮಶೇಖರ, ರಾಧಿಕಾ, ಛತ್ರಪ್ಪ, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net