ವ್ಯವಹಾರ ಜ್ಞಾನ ಕಲಿಸಿದ ಮಕ್ಕಳ ಸಂತೆ

28 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಂಗಾಯಣವು `ನಮ್ಮ ಸಂವಿಧಾನ ನಮ್ಮ ಕಲರವ' ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಗ್ರಾಮೀಣ ಬದುಕು ಹಾಗೂ ವ್ಯವಹಾರದ ಜ್ಞಾನ ನೀಡುವ ಉದ್ದೇಶದಿಂದ ಭಾನುವಾರ `ಮಕ್ಕಳ ಸಂತೆ' ಏರ್ಪಡಿಸಲಾಗಿತ್ತು.

ವೃತ್ತಿ ರಂಗಭೂಮಿ ಕಲಾವಿದೆ ಪ್ರೇಮಾ ತಾಳಿಕೋಟಿ ಮಕ್ಕಳ ಸಂತೆ ಉದ್ಘಾಟಿಸಿ, ಮಕ್ಕಳು ಮಾರಾಟಕ್ಕೆ ತಂದಿರುವ ತಿಂಡಿ- ತಿನಿಸುಗಳನ್ನು ಹಾಗೂ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು. ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಮೊಬೈಲ್‌ಗೆ ಸೀಮಿತವಾಗಿ ಹೊರಗಡೆಯ ಆಟಗಳನ್ನು ನಿಲ್ಲಿಸಿದ್ದಾರೆ. ಮನೆಯ ಗೋಡೆಗಳ ಮಧ್ಯೆ ಇದ್ದು ಹೊರಗಿನ ಸುಂದರ ಪ್ರಪಂಚವನ್ನು ಮರೆತಿದ್ದಾರೆ. ರಂಗಾಯಣದ ಆವರಣದಲ್ಲಿ ಸಂತೆಯನ್ನು ಸೃಷ್ಟಿಸಿ ಖರೀದಿದಾರೊಂದಿಗೆ ಸಂಭಾಷಣೆ ಮಾಡುವ ಕೌಶಲ್ಯ ಹಾಗೂ ವ್ಯವಹಾರದ ಜ್ಞಾನ ನೀಡಿದ್ದು ಶ್ಲಾಘನೀಯ ಎಂದರು.

ಮನೆಯಲ್ಲಿ ತಯಾರಿಸಿದ ಶೇಂಗಾ ಚಿಕ್ಕೆ, ಉಂಡೆ, ಚುರುಮುರಿ, ಮಿರ್ಚಿ- ಗಿರಮಿಟ್, ಸಾವಯುವದಿಂದ ತಯಾರಿಸಿದ ವಸ್ತುಗಳು, ಚಿತ್ರಪಟಗಳು, ಗುಡಿ ಕೈಗಾರಿಕೆ ವಸ್ತುಗಳು, ಕರಕುಶಲ ವಸ್ತುಗಳು, ಪುಸ್ತಕಗಳು, ಪೆನ್ನು, ಸಿಹಿ ತಿನಿಸುಗಳು, ತರಕಾರಿ, ಕಡ್ಲೆಕಾಯಿಗಳನ್ನು ಮನೆಯಿಂದ ತಂದು ಮಾರಾಟ ಮಾಡಿದರು.

ಸಂತೆಯಲ್ಲಿ ಕಳ್ಳತನ ಮಾಡುವ, ತೃತೀಯ ಲಿಂಗಿಗಳ ಭಿಕ್ಷಾಟನೆ, ಹಾಗೂ ಟ್ಯಾಕ್ಸ್ ಭರಿಸಿಕೊಳ್ಳುವ ದೃಶ್ಯಗಳನ್ನು ನೈಜವೆಂಬAತೆ ರಂಗಾಯಣದ ಸಿಬ್ಬಂದಿ ಪ್ರದರ್ಶಿಸಿದರು.

ವಕೀಲ ರಾಜೇಂದ್ರ ಪಾಟೀಲ, ರಂಗ ನಿರ್ದೇಶಕ ಪ್ರಭು ಹಂಚಿನಾಳ, ಶಿಬಿರದ ನಿರ್ದೇಶಕ ಲಕ್ಷ್ಮಣ ಪೀರಗಾರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net