ಶಾಲೆಯಲ್ಲಿ ಮಕ್ಕಳ ಸಂತೆ

19-ANP-P2
ಆನಂದಪುರ ಸಮೀಪದ ಸಿದ್ದೇಶ್ವರ ಕಾಲನಿ ಶಾಲೆಯಲ್ಲಿ ಮಕ್ಕಳ ಸಂತೆಯ ನೋಟ.
Published on

ಆನಂದಪುರ: ಸಿದ್ದೇಶ್ವರ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ಸಂತೆ ಹಮ್ಮಿಕೊಳ್ಳಲಾಗಿತ್ತು. 4 ರಿಂದ 7ನೇ ತರಗತಿವರೆಗಿನ ಮಕ್ಕಳು ಶಾಲಾ ಆವರಣದಲ್ಲಿ ತರಕಾರಿ, ಹೂವು, ಹಣ್ಣು, ಸೊಪ್ಪು, ಕಬ್ಬು, ಗೆಣಸು, ಮರಗೆಣಸು, ಸುವರ್ಣಗಡ್ಡೆ, ತೆಂಗಿನಕಾಯಿ, ಎಳನೀರು, ಬಳೆ, ರಿಬ್ಬನ್, ಬಲೂನು ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಿದರು. ವಿದ್ಯಾರ್ಥಿಗಳು ತಾವು ಮಾರುತ್ತಿರುವ ವಸ್ತುಗಳ ವಿಶೇಷತೆಯನ್ನು ಸಾರುತ್ತ ಗ್ರಾಹಕರನ್ನು ಆಕರ್ಷಿಸುವಂತೆ ಕೂಗಿ ಕರೆಯುತ್ತಿದ್ದರು. ವಸ್ತುಗಳನ್ನು ತೂಕ ಮಾಡಿ, ಅಳೆದು, ಲೆಕ್ಕಿಸಿ ಮಾರಾಟ ಮಾಡಿ ಹಣ ಸ್ವೀಕರಿಸಿ, ಚಿಲ್ಲರೆ ಹಣ ಹಿಂದಿರುಗಿಸುವ ಚಾಕಚಕ್ಯತೆ, ವ್ಯವಹಾರ ಕೌಶಲಗಳನ್ನು ಕಂಡು ಗ್ರಾಮಸ್ಥರು ಖುಷಿ ಪಟ್ಟರು. ಎಸ್‌ಡಿಎಂಸಿ ಅಧ್ಯಕ್ಷ ಮುರಳಿ, ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ದೇವೇಂದ್ರಪ್ಪ ಮದ್ದಲೆಸರ, ಮಧು, ಮುಖ್ಯಶಿಕ್ಷಕ ಕುಮಾರಸ್ವಾಮಿ, ಸಹ ಶಿಕ್ಷಕರಾದ ಶೋಭಾರಾಣಿ, ಭಾರತಿ, ಮಾಲಿನಿ ಇತರರು ಮಕ್ಕಳಿಗೆ ಮಾರ್ಗದರ್ಶನ ನಿಡಿ ಮಕ್ಕಳ ಸಂತೆ ಯಶಸ್ವಿಯಾಗುವಂತೆ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net