ಮಕ್ಕಳಿಗೆ ಹಲವು ಕಲೆಗಳ ಅರಿವು ಅಗತ್ಯ

10 Dwd 4
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳು ಕೇವಲ ಓದಿನತ್ತ ಗಮನ ಹರಿಸುವುದಲ್ಲದೆ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಹೇಳಿದರು.

ನಗರದ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್ಗಳ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ `ನಮ್ಮ ಸಂವಿಧಾನ ನಮ್ಮ ಕಲರವ' ಧ್ಯೇಯವಾಕ್ಯದಡಿ ಹಮ್ಮಿಕೊಂಡಿರುವ ಚಿಣ್ಣರ ಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಕುಟುಂಬದ ಮಾತ್ರವಲ್ಲ, ದೇಶದ ಆಸ್ತಿ. ಆದ್ದರಿಂದ ಪೋಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ನೀಡಬೇಕು. ಕಲೆ, ಬಹುಸಂಸ್ಕೃತಿಗಳ ಕುರಿತು ಅರಿವನ್ನು ಮೂಡಿಸುವ ಕಾರ್ಯವನ್ನು ರಂಗಾಯಣವು ಬೇಸಿಗೆ ಶಿಬಿರದ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ರ0ಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‌ಗಳಲ್ಲಿ ಮುಳುಗಿ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಇಲ್ಲ. ಇಂಥ ಸಂದರ್ಭದಲ್ಲಿ ರಂಗಾಯಣವು ಮಕ್ಕಳಿಗೆ ಹಲವಾರು ಕಲೆ- ಚಟುವಟಿಕೆಗಳು, ನಾಟಕ ಕಲಿಸುವ ಮೂಲಕ ಅವರಲ್ಲಿರುವ ಕಲೆಯನ್ನು ಗುರುತಿಸುವ ಕಾರ್ಯ ಮಾಡುತ್ತದೆ ಎಂದರು.

ಪಾರ್ವತಿ ಹಾಲಭಾವಿ, ಬಿ. ಮಾರುತಿ, ನಿಜಗುಣ ರಾಜಗುರು, ಶಿಬಿರ ನಿರ್ದೇಶಕ ಲಕ್ಷ÷್ಮಣ ಪೀರಗಾರ, ಇತರರಿದ್ದರು. ರಂಗಾಯಣದ ಆಡಳಿತಾಽಕಾರಿ ಶಶಿಕಲಾ ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ವಂದಿಸಿದರು. ಡಾ. ಆನಂದಪ್ಪ ಜೋಗಿ ಅವರು ಕಿನ್ನರಿ ಜೋಗಿ ಕಲೆ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net