ಮಕ್ಕಳ ವಿದ್ಯಾಭ್ಯಾಸ ಮೊಟಕುಗೊಳಿಸ ಬೇಡಿ

IMG_20221101_11113666
Published on

ಚಿತ್ರದುರ್ಗ: ನನ್ನ ಕ್ಷೇತ್ರವನ್ನು ಗುಡಿಸಲು ಮುಕ್ತವನ್ನಾಗಿ ಸಾಕಷ್ಟು ಶ್ರಮಿಸಿದ್ದೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಅಂಬೇ ಡ್ಕ ರ್ ಬಡಾವಣೆಯಲ್ಲಿ ಮಂಗಳವಾರ,85 ನಿವಾಸಿಗಳಿಗೆ ಆಸ್ತಿ ಹಕ್ಕು ಪತ್ರ ವಿತರಿಸಿ ಮಾತನಾಡಿ,ಹಕ್ಕುಪತ್ರ ಪಡೆದ ಬಳಿಕವೂ ಮನೆ ಕಟ್ಟಲು ಆರ್ಥಿಕವಾಗಿ ಶಕ್ತವಾಗಿಲ್ಲದವರಿಗೆ ಸರ್ಕಾರವೇ ನಿಯಮಾನುಸಾರ ವಂತಿಕೆ ಕಟ್ಟಿಸಿಕೊಂಡು ಮನೆ ಕಟ್ಟಿಕೊಡಲಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡಿರುವುದು ಬಡವರಿಗೆ ಸಹಕಾರಿ ಯಾಗಿದೆ. ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ನೀವು ಒಂದು ಒತ್ತು ಉಪವಾಸ ಇದ್ದರು ಪರವಾಗಿಲ್ಲ ಮಕ್ಕಳ ವಿ ದ್ಯಾಭ್ಯಾಸ ಮೊಟಕು ಗೊಳಿಸಬಾರದು. ಬೀದಿದೀಪ,ನೀರಿನ ಸರಬರಾಜು,ರಸ್ತೆ ಸೇರಿ ಯಾವುದು ಬಾಕಿ ಇಲ್ಲದಂತೆ ಅಂಬೇಡ್ಕರ್ ಬಡಾ ವಣೆಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್,ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್,ಸದಸ್ಯರಾದ ಮಂಜುನಾಥ,ಸುರೇಶ್,ವೆಂಕಟೇಶ್, ದಾವೂದ್,ಶ್ರೀದೇವಿ ಚಕ್ರವರ್ತಿ,ತಾರಕೇಶ್ವರಿ,ಇಂಜಿನಿಯರ್ ವೀರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net