ಮಕ್ಕಳ ಬೆಳವಣಿಗೆಗೆ ಆದ್ಯತೆ ಅಗತ್ಯ

P PURA PROTEEN 16
Published on

ಪರಶುರಾಮಪುರ: ಸರ್ಕಾರಿ ಶಾಲೆಗಳಲ್ಲಿ ನಿಯಮಿತವಾಗಿ ಸಹಪಠ್ಯ ಚಟುವಟಿಕೆಗಳನ್ನು ಕೈಗೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಮುಖ್ಯಶಿಕ್ಷಕ ಪಗಡಲಬಂಡೆ ಮಂಜುನಾಥ ಹೇಳಿದರು.

ಪೋಷಣ್ ಅಭಿಯಾನ ಕಾರ್ಯಕ್ರಮದಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳನ್ನು ತರಗತಿವಾರು ವಿಂಗಡಿಸಿ ವಿವಿಧ ಗುಂಪುಗಳಲ್ಲಿ ಗ್ರಾಮಕ್ಕೆ ಶನಿವಾರ ಕರೆದೊಯ್ದು ಹಣ್ಣು, ತರಕಾರಿ, ಬೀದಿ ಬದಿಯ ತಿಂಡಿ ಅಂಗಡಿಗಳು, ಜಂಖ್‌ಪುಡ್ಸ್ ಇತರ ಮಾರಾಟ ಕೇಂದ್ರಗಳ ಮಾಹಿತಿ ನೀಡಿದರು.

ಸ್ವಚ್ಛತೆ ಇಲ್ಲದ ಕಾರಣ ಬೀದಿ ಬದಿ ತಿಂಡಿ-ತಿನಿಸು ಸೇವಿಸುವುದರಿಂದ ಅನೇಕ ಅನಾರೋಗ್ಯಕ್ಕೆ ದಾರಿ ಆಗಲಿದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು. ಪೂರ್ವಿಕರ ಆಹಾರ ಪದ್ಧತಿ ಅನುಸರಿಸಬೇಕು. ತರಕಾರಿ, ಸೊಪ್ಪು, ಕಾಳು ಹೆಚ್ಚು ಸೇವಿಸಬೇಕು ಎಂದರು.

ಶಿಕ್ಷಕಿ ಇ.ಶಿವಮಂಗಳಮ್ಮ ಮಾತನಾಡಿ, ನಮ್ಮ ಪೂರ್ವಜರು ಜಂಕ್‌ಪುಡ್ ಸೇವಿಸುತ್ತಿರಲಿಲ್ಲ. ಬದಲಾಗಿ ಮನೆಯಲ್ಲೇ ಆಹಾರ ತಯಾರಿಸಿ ಸೇವಿಸುತ್ತಿದ್ದರು. ಈ ಕಾರಣಕ್ಕೆ ಅವರು ಧೀರ್ಘಾಯಸ್ಸು, ಆರೋಗ್ಯ ಪಡೆದುಕೊಂಡಿದ್ದರು ಎಂದು ಹೇಳಿದರು.

ಶಿಕ್ಷಕರಾದ ಮಮತಾ, ಉಷಾ, ಶಶಿಕುಮಾರ, ರಂಗಸ್ವಾಮಿ, ಕೆಪಿಎಸ್ ಪ್ರಾಚಾರ್ಯ ನಾಗರಾಜು, ಉಪ ಪ್ರಾಚಾರ್ಯ ತುಂಗಭದ್ರಪ್ಪ ಇದ್ದರು.

ಪರಶುರಾಮಪುರ, ಎಸ್.ದುರ್ಗ, ಪಿ.ಮಹದೇವಪುರ, ದೊಡ್ಡಚೆಲ್ಲೂರು, ಟಿ.ಎನ್.ಕೋಟೆ ಚೌಳೂರು, ದೇವರಮರಿಕುಂಟೆ, ಬೆಳಗೆರೆ, ಸಿ.ಎನ್.ಹಳ್ಳಿ, ಪಗಡಲಬಂಡೆ, ಜಾಜೂರು, ಸಿರಿವಾಳ, ಓಬಳಾಪುರ ಸೇರಿ ಹೋಬಳಿ ವ್ಯಾಪ್ತಿಯ 52 ಹಳ್ಳಿಗಳ ಶಾಲೆಗಳಲ್ಲೂ ಪೋಷಣ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net