ಭಾರತ ಸೇವಾದಳದಿಂದ ಮಕ್ಕಳ ದಿನಾಚರಣೆ

sevadal
ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ ನೆಹರು ಪ್ರತಿಮೆಗೆ ಪುಷ್ಪಾರ್ಚನೆಗೈದರು. ಟಿ.ಕೆ.ಸುಧೀರ್, ಮಂಜೇಗೌಡ ಮೊದಲಾದವರಿದ್ದರು.
Published on

ಮಂಗಳೂರು: ಭಾರತ ಸೇವಾದಳ ವತಿಯಿಂದ ಪಾಂಡೇಶ್ವರದಲ್ಲಿರುವ ನೆಹರು ಪಾರ್ಕ್‌ನಲ್ಲಿ ಪಂಡಿತ್ ಜವಾಹರಲಾಲ್ ನೆಹರು ಜನ್ಮದಿನ ಹಾಗೂ ಮಕ್ಕಳ ದಿನ ಆಚರಿಸಲಾಯಿತು.

ಸೇವಾದಳ ಮಂಗಳೂರು ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್ ಮಾತನಾಡಿ ದೇಶದ ಭವಿಷ್ಯದಲ್ಲಿ ಮಕ್ಕಳ ಪಾತ್ರ ಮಹತ್ವದ್ದು, ಶಿಕ್ಷಣದ ಮೂಲಕ ದೇಶದ ಭವಿಷ್ಯ ರೂಪಿಸಬಹುದು. ಇದಕ್ಕೋಸ್ಕರ ನೆಹರು ಅನೇಕ ವಿದ್ಯಾಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಮಕ್ಕಳು ವಿದ್ಯಾವಂತರಾಗಿ ದೇಶವನ್ನು ಮುನ್ನೆಡೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ ನೆಹರು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಸೇವಾದಳ ಜಿಲ್ಲಾ ಕಾರ್ಯದರ್ಶಿ ಟಿ.ಕೆ.ಸುಧೀರ್, ಜಿಲ್ಲಾ ಸಂಘಟಕ ಮಂಜೇಗೌಡ, ಪದಾಧಿಕಾರಿಗಳಾದ ಉದಯ್ ಕುಂದರ್, ಪ್ರೇಮ್‌ಚಂದ್, ಕೃತಿನ್ ಕುಮಾರ್, ಸುನೀಲ್ ದೇವಾಡಿಗ, ಬೆಂಗ್ರೆ ಸರ್ಕಾರಿ ಶಾಲೆ ಅಧ್ಯಕ್ಷ ರಾಕೇಶ್, ಶಿಕ್ಷಕಿಯರಾದ ಹರಿಣಾಕ್ಷಿ, ಸುಮಾ ಮತ್ತು ನಗರದ ಬೆಂಗ್ರೆ ಸರ್ಕಾರಿ ಶಾಲೆ ಮತ್ತು ಮುಲ್ಲಕಾಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net