ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Sub_Anganwadi
Published on

ಸುಬ್ರಹ್ಮಣ್ಯ: ಅಂಗನವಾಡಿ ಬಾಲವಿಕಾಸ ಸಮಿತಿ, ಹಳೇ ವಿದ್ಯಾರ್ಥಿ ಸಂಘ ಹಾಗೂ ಪಾಲಕರ ವತಿಯಿಂದ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಗುರುವಾರ ನಡೆಯಿತು.

ಬಾಲವಿಕಾಸ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಸಾದ್ ಹೂವನ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ವೆಂಕಟ್ ವಳಲಂಬೆ ಉದ್ಘಾಟಿಸಿದರು.

ಸುಳ್ಯ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಮಹಿಳಾ ಮಂಡಲ ಅಧ್ಯಕ್ಷೆ ಸರೋಜಿನಿ ಮುಳುಗಾಡು, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ದೀಪಿಕಾ, ವಳಲಂಬೆ ಶಾಲಾ ಮುಖ್ಯಶಿಕ್ಷಕಿ ತೃಪ್ತಿ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪುರ್ಲುಮಕ್ಕಿ, ಅಂಗನವಾಡಿ ಕೇಂದ್ರದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ ಕಾಜಿಮಡ್ಕ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಎಚ್, ಸಹಾಯಕಿ ವಿಮಲಾ ಸುಂದರನಾಯ್ಕ ಹಾಗೂ ನಾಟಿವೈದ್ಯೆ ವಿಜಯಲಕ್ಷ್ಮೀ ಕರುವಜೆ ಅವರನ್ನು ಸನ್ಮಾನಿಸಲಾಯಿತು. ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಅಗ್ನಿಬಂಧಕವನ್ನು ಸರೋಜಿನಿ ಗಂಗಯ್ಯ, ಮಕ್ಕಳ ಆಟಿಕೆ ಸಾಮಗ್ರಿಗಳನ್ನು ನಟಿ ಹೇಮಾ ಮೋಟ್ನೂರು, ವಾಟರ್ ಫಿಲ್ಟರ್ ಅನ್ನು ಜಯಂತ ಕಾಜಿಮಡ್ಕ ಕೊಡುಗೆಯಾಗಿ ನೀಡಿದರು.

ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ವಿವಿಧ ಸ್ಪರ್ಧೆ ಆಯೋಜಿಸಿ, ಬಹುಮಾನ ವಿತರಿಸಲಾಯಿತು. ಚೈತನ್ಯಾ ವಳಲಂಬೆ ಸ್ವಾಗತಿಸಿದರು. ಹಸೈನಾರ್ ವಂದಿಸಿದರು. ಸರೋಜಿನಿ ಗಂಗಯ್ಯ, ಸರಸ್ವತಿ ಕಾಜಿಮಡ್ಕ, ನವ್ಯ ಕೋಲ್ಚಾರ್ ಸನ್ಮಾನಪತ್ರ ವಾಚಿಸಿದರು. ಯೋಗೀಶ್ ಹೊಸೊಳಿಕೆ ನಿರೂಪಿಸಿದರು. ಜೀವನ್ ದಂಬೆಕೋಡಿ, ಸಚಿನ್ ಮೊಟ್ಟೆಮನೆ, ಶುಭಕರ ಅಂಜೇರಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net