

ಕೊಳ್ಳೇಗಾಲ : ಪಟ್ಟಣದ ಭವನ್ಸ್ ಗೀತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಆಯೋಜಿಸಲಾಗಿತ್ತು.
ವಿದ್ಯಾಲಯದ ಕಾರ್ಯದರ್ಶಿ ಚೆನ್ನಮಾದೇಗೌಡ ಮಾತನಾಡಿ, ಮಕ್ಕಳು ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಶಾಲೆಗಳಲ್ಲಿ ಪಾಲ್ಗೊಳ್ಳಬೇಕು. ದೇಶ ಹಾಗೂ ರಾಜ್ಯದ ಬಗ್ಗೆ ಪ್ರೇಮವನ್ನು ಬೆಳಿಸಿಕೊಳ್ಳಬೇಕು. ಪಾಲಕರು ಹಾಗೂ ಗುರು-ಹಿರಿಯನ್ನು ಗೌರವಿಸಬೇಕು. ಓದಿನ ಜತೆಗೆ ಸಂಸ್ಕಾರವನ್ನು ಬೆಳಿಸಿಕೊಂಡರೆ ಜೀವನದಲ್ಲಿ ಸಾಧನೆಯ ದಾರಿ ಸುಲಭವಾಗುತ್ತದೆ ಎಂದು ಹೇಳಿದರು.
ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
ಭವನ್ಸ್ ಗೀತಾ ವಿದ್ಯಾಲಯ ಅಧ್ಯಕ್ಷ ಜಿ.ಎನ್.ಗಿರಿರಾಜನ್, ನಿರ್ದೇಶಕ ಕೆ.ಸಿ.ರಾಮಯ್ಯ, ಮುಖ್ಯ ಶಿಕ್ಷಕಿ ಎಂ.ಎಂ.ಮಹೇಶ್ವರಿ, ಸಹ ಶಿಕ್ಷಕ ಎಂ.ಅಭಿಷೇಕ್, ಪ್ರಭಾ, ಭಾಗ್ಯಾ ಇತರರು ಇದ್ದರು.