ಅ೩ರಂದು ರೋಟರಿ ಮಿಸ್ಟಿ ಹಿಲ್ಸ್‌ನಿಂದ ಮಕ್ಕಳ ದಸರಾ

photo 10
Published on

ಮಡಿಕೇರಿ: ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಮಕ್ಕಳ ದಸರಾವನ್ನು ಈ ವರ್ಷ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾಗಿದೆ ಎಂದು ಮಕ್ಕಳ ದಸರಾ ಸಂಚಾಲಕ ಎಚ್.ಟಿ.ಅನಿಲ್ ತಿಳಿಸಿದ್ದಾರೆ.


ಅ೩ ರಂದು ಸೋಮವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೆಳಗ್ಗೆ ೯.೩೦ ಗಂಟೆಯಿಂದ ಮಕ್ಕಳಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ನೇತತ್ವದಲ್ಲಿ ಆಯೋಜಿಸಲ್ಪಟ್ಟಿದೆ. ಮಕ್ಕಳ ದಸರಾವನ್ನು ೮ ವರ್ಷಗಳ ಹಿಂದೆ ಮಡಿಕೇರಿ ದಸರಾದಲ್ಲಿ ಪರಿಚಯಿಸಿದ್ದ ದಸರಾ ಸಾಂಸ್ಕೃತಿಕ ಸಮಿತಿ ಮಾಜಿ ಅಧ್ಯಕ್ಷ ಎಚ್.ಟಿ.ಅನಿಲ್ ಸತತ ೯ನೇ ವರ್ಷ ಮಕ್ಕಳ ದಸರಾ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.


ಮಕ್ಕಳ ಸಂತೆ, ಮಕ್ಕಳ ಮಂಟಪ, ಕ್ಲೇ ಮಾಡೆಲಿಂಗ್, ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳ ಸಂತೆ-ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮಕ್ಕಳ ಸಂತೆಗೆ ಅಗತ್ಯವಿರುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು. ತಂಡದಲ್ಲಿ ಗರಿಷ್ಟ ೪ ಮಕ್ಕಳಿಗೆ ಮಾತ್ರ ಅವಕಾಶ. ಮಕ್ಕಳಿಂದ ಅಂಗಡಿ ಸ್ಪರ್ಧೆ- ವಿದ್ಯಾರ್ಥಿಗಳಿಗಾಗಿ ಮಕ್ಕಳ ಅಂಗಡಿ ಸ್ಪರ್ಧೆ ಆಯೋಜಿಸಲಾಗಿದ್ದು ಒಂದು ತಂಡದಲ್ಲಿ ೪ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.


ಮಕ್ಕಳ ಮಂಟಪ- ಗರಿಷ್ಟ ೫ ವಿದ್ಯಾರ್ಥಿಗಳ ತಂಡದಲ್ಲಿ ಮಕ್ಕಳ ಮಂಟಪ ಸ್ಪರ್ಧೆ ಆಯೋಜಿಸಲ್ಪಟ್ಟಿದೆ. ಛದ್ಮವೇಷ ಸ್ಪರ್ಧೆ- ಎಲ್‌ಕೆ.ಜಿ.ಯಿಂದ ೧ ನೇ ತರಗತಿಯವರೆಗಿನ ವಿಭಾಗ, ೨ನೇ ತರಗತಿಯಿಂದ ೪ನೇ ತರಗತಿಯವರೆಗಿನ ವಿಭಾಗ, ೫ನೇ ತರಗತಿಯಿಂದ ೭ನೇ ತರಗತಿ ವಿಭಾಗದಲ್ಲಿ ಛಧ್ಮವೇಷ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದೆ. ಕ್ಲೇ ಮಾಡೆಲಿಂಗ್ ಸ್ಪರ್ಧೆ- ೬ ಮತ್ತು ೭ನೇ ತರಗತಿ ವಿಧ್ಯಾರ್ಥಿಗಳ ವಿಭಾಗ, ೮ ರಿಂದ ೧೦ನೇ ತರಗತಿ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯಲಿದೆ. ಸ್ಥಳದಲ್ಲೇ ಕ್ಲೇ ಮಾಡೆಲಿಂಗ್ ತಯಾರಿಸಬೇಕು ಎಂದು ತಿಳಿಸಿದ್ದಾರೆ.


ಮಕ್ಕಳ ದಸರಾದ ವೈವಿಧ್ಯಮಯ ಸ್ಪಧ್ಸೆಗಳಿಗೆ ಹೆಸರು ನೋಂದಾಯಿಸಲು ಸೆ೨೬ ಕೊನೇ ದಿನವಾಗಿದೆ. ಹೆಸರು ನೋಂದಾಯಿಸಲು ಮಕ್ಕಳ ಸಂತೆ-ಶಫಾಲಿ ರೈ (೯೭೪೧೫೨೩೪೮೪), ಮಕ್ಕಳ ಅಂಗಡಿ -ಪಲ್ಲವಿ ಪ್ರಸಾದ್(೯೯೭೨೯೬೩೧೫೧), ಮಕ್ಕಳ ಮಂಟಪ- ಶಮ್ಮಿ ಪ್ರಭು( ೯೪೪೯೮೩೩೧೭೯), ಛದ್ಮವೇಷ- ಗಾನಾ ಪ್ರಶಾಂತ್(೯೪೪೮೭೧೩೭೪೩), ಕ್ಲೇ ಮಾಡೆಲಿಂಗ್-ರಾಧಿಕ ವಿಶ್ವ(೯೭೪೧೭೮೯೨೭೧) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net