ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವ ವಿದ್ಯಾಕೇಂದ್ರ ಶಾಲೆಯ 22ನೇ ವರ್ಷದ ಮಕ್ಕಳ ಸಾಂಸ್ಕೃತಿಕ ಹಬ್ಬ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಫೆ.5ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.
ಶ್ರೀ ಶಿವ ವಿದ್ಯಾಕೇಂದ್ರ ಶಾಲಾ ಆವರಣದಲ್ಲಿ ಆಯೋಜಿಸಿರುವ ಈ ಸಮಾರಂಭಕ್ಕೆ ಕೊಳ್ಳೇಗಾಲದ ಬಿಇಒ ಎಂ.ಮಂಜುಳಾ ಚಾಲನೆ ನೀಡಲಿದ್ದಾರೆ. ಶಾಲಾ ಆಡ ಳಿತ ಮಂಡಳಿ ಅಧ್ಯಕ್ಷೆ ರುದ್ರಾಂಬ ಶಿವರುದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಾಲೆಯ ಕಾರ್ಯದರ್ಶಿ ಎಚ್.ಎಸ್.ದಿನೇಶ್‌ಬಾಬು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಖಜಾಂಚಿ ರಶ್ಮಿ ದಿನೇಶ್ ಬಾಬು ಕ್ರೀಡಾಕೂಟದ ಚಾಂಪಿಯನ್‌ಷಿಪ್ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಿದ್ದಾರೆ. ಯುವ ವಿಜ್ಞಾನಿ ಪ್ರಶಸ್ತಿ ವಿಜೇತ ಡಾ.ವಾಗೀಶ್ ಬಾಬು, ಶಾಲಾ ಆಡಳಿತಾಧಿಕಾರಿ ಎಚ್.ಡಿ.ಸುಭಾಷ್ ವೀರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಬಾಬು ಪ್ರಕಟನೆಯಲ್ಲಿ ತಿಳಿಸಿದ್ದಾರೆ.