ಮಕ್ಕಳ ಭಜನಾ ಮಂಡಳಿ ವಾರ್ಷಿಕೋತ್ಸವ

kanakadasa
Published on

ಸುಳ್ಯ: ಕನಕಮಜಲಿನ ಕನಕದಾಸ ಮಕ್ಕಳ ಭಜನಾ ಮಂಡಳಿ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಮಂಗಳವಾರ ಸಂಜೆ ಕನಕಮಜಲು ಪೆರಂಬಾರಿನ ಮದಿಮಾಳು ಪಾದೆ ಶ್ರೀ ದುರ್ಗಾದೇವಿ ಅಮ್ಮನವರ ಕ್ಷೇತ್ರದಲ್ಲಿ ನಡೆಯಿತು.

ರಾಮಕೃಷ್ಣ ಕಾಟುಕುಕ್ಕೆ ಉಪಸ್ಥಿತಿಯಲ್ಲಿ ‘ಸಮೂಹ ಗಾಯನ’ ನಡೆದ ಬಳಿಕ ಗುರುವಂದನಾ ಕಾರ್ಯಕ್ರಮ ನಡೆಯಿತು. ಕನಕದಾಸ ಮಕ್ಕಳ ಭಜನಾ ಮಂಡಳಿ ಅಧ್ಯಕ್ಷೆ ಆಕಾಂಕ್ಷ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಣ್ಣಗೌಡ ಪೆರುಂಬಾರು, ಕಾರ್ಯದರ್ಶಿ ವಾಸುದೇವ ಪೆರುಂಬಾರು, ಉತ್ಸವ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಗೌಡ ಅಕ್ಕಿಮಲೆ, ಕಾರ್ಯದರ್ಶಿ ಜಯಪ್ರಸಾದ್ ಕಾರಿಂಜ ಉಪಸ್ಥಿತರಿದ್ದರು.

ಮಧ್ವಾಧೀಶ ವಿಠಲದಾಸ ನಾಮಾಂಕಿತ ದಾಸ ಸಾಹಿತ್ಯ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿಯ ನಿರ್ದೇಶಕಿ ಹೇಮಾ ಗಣೇಶ್ ಕಜೆಗದ್ದೆ ದಂಪತಿಗಳನ್ನು ಗೌರವಿಸಲಾಯಿತು.

ವಾರ್ಷಿಕ ಸಂಭ್ರಮದ ಪ್ರಯುಕ್ತ ಮಂಡಳಿಯ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ನಿರ್ದೇಶಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ದಾಸವಾಣಿ ಭಜನಾಮೃತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net