ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಅವಶ್ಯ

4
Published on

ನಿಪ್ಪಾಣಿ: ಮಕ್ಕಳ ಸರ್ವಾಂಗೀಣ ವಿಕಾಸವೇ ಕೆಎಲ್‌ಇ ಸಂಸ್ಥೆಯ ಗುರಿ. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಪ್ರತಿ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಅಮರ ಬಾಗೇವಾಡಿ ಹೇಳಿದರು.

ಹೊಸ ವರ್ಷದ ಅಂಗವಾಗಿ ನಗರದ ಕೆಎಲ್‌ಇ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಆಹಾರ ಮೇಳ, ಮನೋರಂಜನಾ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರ ಮೇಳ ಕಾರ್ಯಕ್ರಮ ಮನಸೂರೆಗೊಳಿಸಿತು. ಮಕ್ಕಳು ವಿವಿಧ ಬಗೆಯ ಆಹಾರಗಳನ್ನು ತಯಾರಿಸಿದ್ದರು. ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರಾದ ಡಾ.ಪ್ರಮೋದ ಗಾಡವೆ, ಪಿ.ಐ. ಪಾಟೀಲ, ಬಸನಗೌಡ ಪಾಟೀಲ, ಡಾ. ಮಹಾಂತೇಶ ಮುರಳಿ, ಹೇಮಲತಾ ಚಿಕ್ಕಮಠ, ಮುಖ್ಯಶಿಕ್ಷಕ ಬೀರೇಶ ಪರಮಾನಟ್ಟಿ, ಶಿಕ್ಷಕಿ ರೋಹಿನಿ ಪೂಜಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net