

ಬೆನಕಟ್ಟಿ: ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗಿ ಅಮೂಲ್ಯ ಜೀವ ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿ ಎಂದು ಪ್ರೊ.ಶ್ರೀಧರ ಆಸಂಗಿಹಾಳ ಹೇಳಿದರು.
ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ- ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ಮಕ್ಕಳಿಗೆ ಸಂಸ್ಕಾರ ಬೆಳೆಸುವ ಕಾರ್ಯವಾಗಬೇಕಿದೆ. ಮಕ್ಕಳಲ್ಲಿನ ಮೊಬೈಲ್ ಗೀಳು ತೊಡೆದು ಪುಸ್ತಕ ಓದುವ ಹವ್ಯಾಸ ರೂಢಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ ಮಾತನಾಡಿದರು. ಮಹಾಂತೇಶ ಗಿಲಾಕಿ, ಅರ್ಚಕ ಮಲ್ಲಿಕಾರ್ಜುನ ದೇವರಮನಿ, ಕಮಲವ್ವ ವೀರಶೆಟ್ಟಿ, ರುದ್ರವ್ವ ಹೊಸುರ, ಸುಜಾತಾ ಗಿಲಾಕಿ, ಕೀರವ್ವ ಕುರಿ, ಮಹಾದೇವಿ ಜಕಬಾಳ, ಪ್ರೇಮಾ ಕೆಂಚನ್ನವರ, ಸುನಿತಾ ಕುಸಲಿ, ರುದ್ರವ್ವ ಹರಳಿ, ಮಂಜುಳಾ ಕಟ್ಟಿಮನಿ, ಮರೆವ್ವ ಕೋರೆ ಇತರರಿದ್ದರು. ನಿರ್ಮಲಾ ಕಳಸನಗೌಡರ ನಿರೂಪಿಸಿದರು. ಶಂಕರ ಚಿಕ್ಕನಗೌಡರ ಸ್ವಾಗತಿಸಿದರು. ಮಹಾದೇವಿ ಲಕ್ಕಪ್ಪನ್ನವರ ವಂದಿಸಿದರು.