

ನವಲಗುಂದ: ಮಕ್ಕಳ ಬದುಕಿಗೆ ವಿದ್ಯೆಯನ್ನು ನೀಡುತ್ತಿರುವ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ನರಗುಂದದ ತಪೋತಾಣ ಪುಣ್ಯಾರಣ್ಯ ಪತ್ರಿವನಮಠದ ಪರಮಪೂಜ್ಯ ಷ.ಬ್ರ. ಡಾ. ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಮಕ್ಕಳಿಗೆ ಹಣ ಆಸ್ತಿ ಮಾಡುವುದಕ್ಕಿಂತ ಒಳ್ಳೆಯ ಶಿಕ್ಷಣ ಕೊಡಿಸಿದರೆ ಸಾಕು ಅದೇ ದೊಡ್ಡ ಆಸ್ತಿಯಾಗುತ್ತದೆ ಎಂದರು.
ಬಿ.ಜಿ. ಬಿಲ್ಶಿವಣ್ಣವರ ಅಧ್ಯಕ್ಷತೆ ವಹಿಸಿದ್ದರು. ಒಂದನೇ ತರಗತಿ ಮಕ್ಕಳ ಅನುಭವ ಮಂಟಪ ಕಾರ್ಯಕ್ರಮ ಮನಸೂರೆಗೊಂಡಿತು. ವಿವಿಧ ಗಣ್ಯರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಆರ್.ಎಫ್. ಭರಮಗೌಡ್ರ, ನಿಂಗಪ್ಪ ಕುರಬರ, ಪುರಸಭೆ ಸದಸ್ಯ ಜೀವನ ಪವಾರ, ಸಮಾಜ ಸೇವಕ ಮಾಬುಸಾಬ್ ಯರಗುಪ್ಪಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಚ್. ಚಿಕನಾಳ, ಶ್ರೀನಿವಾಸ ಅಮಾತೆಣ್ಣವರ, ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಬಿ.ಎಸ್. ಕುರಬರ, ಮುಖ್ಯೋಪಾಧ್ಯಾಯ ಎನ್.ಬಿ. ಕುರುಬರ, ಸಹ ಶಿಕ್ಷಕರಾದ ಅನಿಲ ಕೊಣ್ಣೂರ, ಮಂಜುಳಾ ಲಿಂಗದಾಳ, ಅಲ್ಲಾಬಿ ದೊಡ್ಡಮನಿ, ಮಹೇಶ ಲಕ್ಕುಂಡಿ, ಸಿದ್ದು ಗಡೆನ್ನವರ, ಭುವನೇಶ್ವರಿ ಇನಾಮತಿ,ಇತರರು ಉಪಸ್ಥಿತರಿದ್ದರು.