

ರಾಯಬಾಗ: ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಚಿಕ್ಕೋಡಿ ಅಬಕಾರಿ ನಿರೀಕ್ಷಕ ರಾಜು ಗೊಂಡೆ ಹೇಳಿದರು.
ತಾಲೂಕಿನ ಖೈರವಾಡಿ ಹಾಲಸಿದ್ಧೇಶ್ವರ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ರಾಯಬಾಗ ಗ್ರಾಮೀಣ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ಲಸ್ಟರ್‌ಮಟ್ಟದ ಪ್ರತಿಭಾಕಾಂರಜಿ ಉದ್ಘಾಟಿಸಿ ಮಾತನಾಡಿ, ನಿರ್ಣಾಯಕರು ತಾರತಮ್ಯ ಮಾಡದೇ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಸವರಾಜ ಕಾಂಬಳೆ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಬೆಳೆಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಸಂಸ್ಥೆ ಅಧ್ಯಕ್ಷ ರಾಯಪ್ಪ ಗೊಂಡೆ, ಸಿಆರ್‌ಪಿ ಅನಿಲ ಸುತಾರ, ಶಿಕ್ಷಣ ಸಂಯೋಜಕ ಮನೋಹರ ಪೂಜಾರಿ, ವಿನೋದ ಚವ್ಹಾಣ, ವಿ.ಬಿ.ಅರಗೆ, ಬಿ.ಡಿ.ಕೋಳಿ, ಕುಮಾರ ಗೆನ್ನೆನ್ನವರ, ಎಚ್.ಎಫ್. ಆಯಟ್ಟಿ, ಅಂಬರೀಶ ಕಾಂಬಳೆ, ಮಹಾದೇವ ಗೆನ್ನಾನಿ, ಚನ್ನಮ್ಮ ನಾಯಿಕ, ಪ್ರೇಮಾ ಗೊಂಡೆ, ಎಂ.ಎಸ್.ಪಟೇಲ ಇತರರಿದ್ದರು.