

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳ ಮನಸ್ಸು ಸೂಕ್ಷ$್ಮವಾಗಿದೆ. ಅವರ ಸರ್ವಾಂಗೀಣ ವಿಕಾಸವಾಗಲು ಕ್ರೀಯಾಶೀಲ ಮತ್ತು ಸೃಜನಶೀಲ ಚಟುವಟಿಕೆಗಳು ಅವಶ್ಯವಾಗಿದೆ. ಅಂತಹ ಸೂಕ್ತವಾದ ಕಾರ್ಯ ಚಟುವಟಿಕೆಯನ್ನು ವಿಜಯ ಲಲಿತಕಲಾ ಸಂಸ್ಥೆಯ ವಿಜಯ ಪ್ರಾಥಮಿಕ ಶಾಲೆಯ ಕಾರ್ಯ ಅಮೋವಾಗಿದೆ ಎಂದು ಶಿಕಿ ಕವಿತಾ ದಂಡಿನ ಮಾತನಾಡಿದರು.
ನಗರದ ವಿಜಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿದ್ಯಾಥಿರ್ಗಳಿಗೆ ಹಮ್ಮಿಕೊಂಡ ವೇಷಭೂಷಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಕ್ಕಳ ಮನಸ್ಸನ್ನು ಬೆಳೆಸಲು ಹಲವು ಮಾಧ್ಯಮಗಳು ಇಂದು ಬಹು ಉಪಯೋಗಿ ಮಾಧ್ಯಮವಾಗಿ ಬೆಳೆದಿವೆ. ಆದರೆ, ಅದರ ಬಳಕೆ ಪ್ರಮಾಣ ಮಕ್ಕಳಿಗೆ ಮಿತವಾಗಿರಬೇಕು. ಮಕ್ಕಳಿಗೆ ಹೆಚ್ಚು ಮೊಬೈಲ್ ಕೊಟ್ಟು ಅವರನ್ನು ಮೊಬೈಲ್ ಗೆ ಹೊಂದಿಕೊಳ್ಳುವಂತೆ ಮಾಡಿದರೆ, ಅನಾರೋಗ್ಯ ನಿರ್ಮಾಣವಾಗುತ್ತದೆ. ಇಂತಹ ಮಾಧ್ಯಮದಿಂದ ಮುಕ್ತ ಮಾಡಲು ನೇರ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ನೈಜವಾಗಿ ಮಕ್ಕಳ ಅಭಿನಯ ಮತ್ತು ಸೃಜನಶೀಲ ಮನೊಭಾವ ಬೆಳವಣಿಗೆಗೆ ಪ್ರೇರಕವಾಗುತ್ತದೆ ಎಂದರು.
ನಗರದ ವಿವಿಧ ಶಾಲೆಯ ಮಕ್ಕಳು ವೈವಿಧ್ಯಮಯ ವೇಷಭೂಷಣದ ತೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸದ್ದರು. ವಿಜೇತ ವಿದ್ಯಾಥಿರ್ಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಕ್ಕಳಾದ ಅವನಿ, ಲಕ್ಷ$್ಮಣ, ಕಾರುಣ್ಯ, ಯಶ್ವಿತ್, ಸುದಿಾ, ಜೀವಾ ವಿದ್ಯಾಥಿರ್ಗಳು ಬಹುಮಾನ ಪಡೆದರು.
ಜಯಶ್ರೀ ಪಾಟೀಲ, ಲಲಿತಾ ಬಾಳಿಹಳ್ಳಿಮಠ, ನಿರ್ಮಲಾ ಕೊಳ್ಳಿ, ಸುವರ್ಣ ಮದರಿಮಠ, ಸಾಗರಿಕಾ ಅಕ್ಕಿ, ಪೂಜಾ ಭೂಮ, ಶೃತಿ ಪಾಟೀಲ, ರೇಷ್ಮಾ ಗಾಣಿಗೇರ, ವಿಜಯಲಕ್ಷಿ$್ಮ, ರೇಖಾ ಮಾಳೆಕರ ಇತರರು ಇದ್ದರು.