ಕಲಾಕೃತಿಗಳನ್ನು ರಚಿಸಿ ಪ್ರತಿಭೆ ಪ್ರದರ್ಶಿಸಿದ ಮಕ್ಕಳು

28-GPT-4
ಗುಂಡ್ಲುಪೇಟೆಯ ಸೆಂಟ್ ಜಾನ್ಸ್ ಶಾಲೆಯಲ್ಲಿ ತರಕಾರಿಗಳಿಂದ ನಾನಾ ಕಲಾಕೃತಿಗಳನ್ನು ಮಾಡಿ ಪ್ರತಿಭೆ ಪ್ರದರ್ಶಿಸಿದರು.
Published on

ಗುಂಡ್ಲುಪೇಟೆ: ಪಟ್ಟಣದ ಸೆಂಟ್ ಜಾನ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳು ಗುರುವಾರ ತರಕಾರಿಗಳಿಂದ ನಾನಾ ಕಲಾಕೃತಿಗಳನ್ನು ಮಾಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಶಾಲೆಯ ಗ್ರೀನ್ ತಂಡದ ವಿದ್ಯಾರ್ಥಿಗಳು ವಿವಿಧ ತರಕಾರಿಗಳಿಂದ ಸ್ವಾಗತ ಕಮಾನು, ಮನೆಯ ಮುಂಬಾಗಿಲು, ಮುಖವಾಡ, ಆಟಿಕೆಗಳು, ಬುಟ್ಟಿಗಳು, ವಿಮಾನ ಮುಂತಾದ ನಾನಾ ಕಲಾಕೃತಿಗಳನ್ನು ರಚಿಸಿ ಸಾರ್ವಜನಿಕರು ಹಾಗೂ ಶಿಕ್ಷಕರಿಂದ ಮೆಚ್ಚುಗೆ ಗಳಿಸಿದರು.

ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವ ಸಲುವಾಗಿ ಗಾಯನ, ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇವುಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದ ಎಲ್ಲ ಮಕ್ಕಳಿಗೂ ಡಿ.20 ರಂದು ಆಯೋಜಿಸಿರುವ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net