ಮಕ್ಕಳು ತಂದೆ- ತಾಯಿ ಮಾತು ಪಾಲಿಸಲಿ

tlk-2
ತಾಳಿಕೋಟೆಯಲ್ಲಿ ಸಾಂಭಪ್ರಭು ಶರಣಮುತ್ಯಾರ ಮಹಾ ರಥೋತ್ಸವ ಕುರಿತು ನಡೆದ ಶ್ರೀ ಪವಾಡಬಸವೇಶ್ವರರ ಮಹಾಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನಕಾರ ಮಹಾದೇವಯ್ಯ ಶಾಸೀಗಳನ್ನು ಸನ್ಮಾನಿಸಲಾಯಿತು.
Published on

ತಾಳಿಕೋಟೆ: ಹೆತ್ತ ತಂದೆ- ತಾಯಿ, ಗುರುಹಿರಿಯರ ಮಾತನ್ನು ಮಕ್ಕಳು ಪಾಲಿಸಬೇಕೆಂದು ಬಸವೇಶ್ವರ ಉತ್ಸವ ಸಮಿತಿ ಹಾಗೂ ಗೆಳೆಯರ ಬಳಗದ ಯುವ ಮುಖಂಡ ಮಹಾಂತೇಶ ಮುರಾಳ ಹೇಳಿದರು.

ಸ್ಥಳೀಯ ಶ್ರೀ ಶರಣಮುತ್ಯಾರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಪ್ರವಚನಕಾರ ಮಹಾದೇವಯ್ಯ ಶಾಸ್ತ್ರಿ ಹಾಗೂ ಶರಣರು ಹಾಗೂ ಸಂಗೀತಗಾರರನ್ನು ಬಳಗದ ಪರ ಸನ್ಮಾನಿಸಿ ಅವರು ಮಾತನಾಡಿದರು.

ತಂದೆ- ತಾಯಿ ಕುರಿತು ನಿರ್ಲಕ್ಷೃ ತೋರಿ ಅವರನ್ನು ತಾಚಾರ ಮನೋಭಾವದಿಂದ ಕಂಡರೆ ನರಕದ ದಾರಿ ತಪ್ಪಿದ್ದಲ್ಲ ಎಂದು ತಿಳಿಸಿದರು.

ಖ್ಯಾತ ಪುರಾಣ ಪ್ರವಚನಕಾರ ಶರಣಸೋಮನಾಳದ ವೇ. ಮಹಾದೇವಯ್ಯ ಶಾಸೀಗಳು ಮಾತನಾಡಿ, ಮಹಾತ್ಮರಾದವರು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆಯಲ್ಲಿ ಕಾಯಕ ದಾಸೋಹ, ಕಾಲ, ಸಮಯ ಎಂಬುದರ ಕುರಿತು ಅರ್ಥೈಸಿ ಹೇಳಿದ್ದಾರೆ. ನಿತ್ಯದ ಬದುಕಿನಲ್ಲಿ ಸ್ವಲ್ಪ ಸಮಯವನ್ನಾದರೂ ದೇವರ ಪೂಜೆ, ಪುನಸ್ಕಾರದಲ್ಲಿ ತೊಡಗಿಸಿಕೊಂಡರೆ ದೇವರು ಒಲೆಯುತ್ತಾನೆ ಎಂದರು.

ಶರಣರ ಮಠದ ಬಸಣ್ಣ ಶರಣಮುತ್ಯಾ, ಶರಣಪ್ಪಮುತ್ಯಾ, ಸಿದ್ದನಗೌಡ ಪೊಲೀಸ್‌ಪಾಟೀಲ, ಶರಣೆ ಕಾಶಿಬಾಯಿ ಅಮ್ಮ, ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು, ಸಿದ್ದಣ್ಣ ಶರಣರ, ಶಾಂತಗೌಡ ಬಿರಾದಾರ, ನಿಂಗನಗೌಡ ಪಾಟೀಲ(ಗಡಿಸೋಮನಾಳ), ಶ್ರೀಕಾಂತ ಬಿರಾದಾರ, ಮಲ್ಲಣ್ಣ ಇಂಗಳಗಿ, ಗುರುಮೂರ್ತಿ ಹಿರೇಮಠ, ಸಾಹಿಲ್ ಮುರಾಳ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ, ಅಪ್ಪು ಕಲ್ಲೂರ, ತಿಪ್ಪಣ್ಣ ಸಜ್ಜನ, ಭೀಮು ಸೂಳಿಭಾವಿ, ಮಲ್ಲು ಮದರಕಲ್ಲ, ಶ್ರೀಶೈಲ ಹಿರೇಮಠ ಇತರರಿದ್ದರು.

ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಸಂಗೀತ ಸೇವೆ ನಡೆಸಿಕೊಟ್ಟರು.

ಶರಣಗೌಡ ಪೊಲೀಸ್‌ಪಾಟೀಲ ಸ್ವಾಗತಿಸಿದರು. ಈರಣ್ಣ ಶರಣರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net