ಮಕ್ಕಳು ಆಚಾರ-ವಿಚಾರಗಳನ್ನು ಮರೆಯಬಾರದು; ರಮೇಶ್ ಜೋಯಪ್ಪ

MDK03
Published on

ಮಡಿಕೇರಿ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಕಳೆದು ಹೋಗದೆ ನಮ್ಮ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಹೋಗಬೇಕೆಂದು ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಕರೆ ನೀಡಿದರು.


ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜನಾಂಗದ ಮಕ್ಕಳಿಗೆ ಹಾಗು ಪಾಲಕರಿಗೆ ಏರ್ಪಡಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಜನಾಂಗದ ಮಕ್ಕಳ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಪ್ರತಿ ವರ್ಷ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರೊಂದಿಗೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಮಕ್ಕಳು ನಮ್ಮ ಆಚಾರ ವಿಚಾರವನ್ನು ಮರೆಯಬಾರದು ಎಂದರು.


ಛದ್ಮವೇಷ, ರಸಪ್ರಶ್ನೆ, ಚಿತ್ರಕಲೆ, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ಛದ್ಮವೇಷ ಧರಿಸಿದ ಪುಟಾಣಿ ಮಕ್ಕಳು ಕಾರ್ಯಕ್ರಮ ಉದ್ಘಾಟಿಸಿದರು. ಹುದೇರಿ ಜಗದೀಶ್, ಚೆರಿಯಮನೆ ರೋಹಿಣಿ, ಕೆದಂಬಾಡಿ ಕಾಂಚನ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಪುದಿಯನೆರವನ ರೇವತಿ ರಮೇಶ್, ವಿನೋದ್ ಮೂಡಗದ್ದೆ, ಹೊಸಗದ್ದೆ ಕಲ್ಪನ, ಚಿತ್ರಕಲಾವಿದ ಪ್ರಸನ್ನ ತೀರ್ಪುಗಾರರಾಗಿದ್ದರು.


ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ್, ನಿರ್ದೇಶಕರಾದ ಕುದುಪಜೆ ಬೋಜಪ್ಪ, ದೇವಂಗೋಡಿ ಹರ್ಷ, ಕೆದಂಬಾಡಿ ಕೀರ್ತಿಕುಮಾರ್, ಸಂಘದ ಸಿಬ್ಬಂದಿಗಳಾದ ಮತ್ತಾರಿ ರಮೇಶ್, ಕಡ್ಯದ ದಿನೇಶ್ ಉಪಸ್ಥಿತರಿದ್ದರು.


ಸ್ಪರ್ಧಾ ವಿಜೇತರು: ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ದಾಯನ ಹೆಲಿನಾ ನರೇಂದ್ರ, ನಡುಗಲ್ಲು ಹಿತಾಶ್ರಿ ರೋಹಿತ್, ಕಾವೇರಿಮನೆ ಯಜ್ಞ ರಾಜೇಶ್, ಛದ್ಮ ವೇಷ ಸ್ಪರ್ಧೆಯಲ್ಲಿ ಕೂಡಕಂಡಿ ಧನ್ವಿ ದಯಾನಂದ್, ಕಾವೇರಿಮನೆ ರಕ್ಷಿತಾ ರಾಜೇಶ್, ಕಾನಡ್ಕ ಪೂರ್ವಿಕಾ ದೇವಯ್ಯ, ದೇಶಭಕ್ತಿ ಗೀತೆ ಪಾಲಕರ ವಿಭಾಗದಲ್ಲಿ ಪೈಕೇರ ಸುಚಿ ಮಾದಪ್ಪ, ನಡುಗಲ್ಲು ಜಯಂತಿ ರೋಹಿತ್, ಕೂಡಕಂಡಿ ಓಂಶ್ರೀ ದಯಾನಂದ್, ಪಿಯುಸಿ ಮತ್ತು ಪದವಿ ವಿಭಾಗದಲ್ಲಿ ಉಳುವಾರ ವೈಶಾಲಿ, ಕರ್ಣಯನ ವೈಶಾಲಿ, ಕೇಡನ ಪ್ರಗತಿ ಸೊಮಣ್ಣ, ಚಿತ್ರ ಕಲಾ ವಿಭಾಗದಲ್ಲಿ ಕೆದಂಬಾಡಿ ಎಸ್.ಚಾರ್ವಿ ಪ್ರಸಾದ್, ಅದ್ವಿಕ್ ಪರಿಚನ, ಹೊಸಗದ್ದೆ ಹವ್ಯಾಸ್ ಚೇತನ್ ಬಹುಮಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net