ಮಕ್ಕಳು ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳಿ

15BTP01
ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಜವಾಹರ್ ಲಾಲ್ ನೆಹರು ಜಯಂತಿ ಹಾಗೂ ಮಕ್ಕಳ ದಿನವನ್ನು ಗುರುವಾರ ಆಚರಿಸಲಾಯಿತು. ನಾರಾಯಣಗೌಡ, ಕಾವ್ಯಾ ಜನಾರ್ದನ್, ಬಿ.ಬಿ.ಮಹೇಶ್, ಚಂದನಾ, ತುಂಗಾಶ್ರೀ, ಸವಿತಾ, ಗೋಪಾಲ್, ಚಂದ್ರು, ಎಚ್.ಟಿ.ಗೋವಿಂದೇಗೌಡ ಇದ್ದರು.
Published on

ಬೆಟ್ಟದಪುರ: ಶಾಲೆಯ ಆತ್ಮವೇ ಮಕ್ಕಳಾಗಿದ್ದಾರೆ. ಮಕ್ಕಳು ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶಕ್ಕೆ ಉತ್ತಮ ನಾಗರಿಕರಾಗಿ ಹೊರಬರಬೇಕು ಎಂದು ನಿವೃತ್ತ ಪಿಡಿಒ ನಾರಾಯಣಗೌಡ ಹೇಳಿದರು.

ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಜವಾಹರ್ ಲಾಲ್ ನೆಹರು ಅವರ ಜಯಂತಿಯ ಹಾಗೂ ಮಕ್ಕಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಎಂದರೆ ಎಲ್ಲರಿಗೂ ಸಂತೋಷ. ಮಕ್ಕಳು ದೇವರ ಪ್ರತಿರೂಪವೇ ಆಗಿರುವುದರಿಂದ ಅವರ ಕುರಿತು ಹೆತ್ತವರು, ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಕಾವ್ಯಾ ಜನಾರ್ದನ್, ಉಪಾಧ್ಯಕ್ಷ ಬಿ.ಬಿ ಮಹೇಶ್, ಸದಸ್ಯರಾದ ಚಂದನಾ, ತುಂಗಾಶ್ರೀ, ಸವಿತಾ, ಗೋಪಾಲ್, ಚಂದ್ರು, ಮುಖಂಡ ಎಚ್.ಟಿ ಗೋವಿಂದೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ, ಸಿಬ್ಬಂದಿ ಕಿರಣ್, ಆನಂದ, ನಂಜೇಗೌಡ, ಮುಖ್ಯಶಿಕ್ಷಕ ಕೆ.ಸಿ.ಸತೀಶ್, ಶಿಕ್ಷಕರಾದ ವಿದ್ಯಾಶ್ರೀ, ಸಾಜಿಯ ಪರ್ವೀನ್, ಉಮಾಶ್ರೀ, ಚಂದ್ರಶೇಖರ್, ನಾಗರತ್ನಾ, ರುಕ್ಮಿಣಿ, ಸ್ವಾತಿ, ನಂದಿನಿ, ಜಬಿನಾ ಬೀಬಿ, ಯಶೋದಮ್ಮ ಸೇರಿದಂತೆ ಅಡುಗೆ ಸಿಬ್ಬಂದಿ ಮತ್ತು ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net