

ರೋಣ: ಗುರಿ ಸಾಧಿಸಲು ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣದ ಕಡೆ ಗಮನ ಹರಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕ,ಶಿಕ್ಷಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಮಹೇಶ ಮಾಸಾಳ ಮಾತನಾಡಿ, ಮಕ್ಕಳು ಶಿಕ್ಷಕರನ್ನು ಪ್ರೀತಿಸಬೇಕು. ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದರು.
ರೋಣ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಎ.ಎನ್, ಗಜೇಂದ್ರಗಡ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ. ಮೋಹನ, ತಹಸೀಲ್ದಾರ್ ವಾಣಿ ಉಂಕಿ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ, ಬಸವರಾಜ ಅಂಗಡಿ, ಎಂ.ಎ. ಫನಿಬಂದ, ವಿ.ಆರ್. ಗುಡಿಸಾಗರ, ಐ.ಎಸ್. ಪಾಟೀಲ, ವಿ.ಬಿ. ಸೋಮನಕಟ್ಟಿ ಮಠ, ಪರಶುರಾಮ ಅಳಗವಾಡಿ, ಪ್ರಭು ಮೇಟಿ, ಸಿದ್ದಣ್ಣ ಬಂಡಿ, ಶರಣಗೌಡ ಪಾಟೀಲ, ವೈ.ಡಿ. ಗಾಣಿಗೇರ, ಶಿವರಾಜ ಘೋರ್ಪಡೆ, ಡಾ.ಎಂ.ಎ. ಹಾದಿಮನಿ, ಡಿ.ವಿ. ಬಿರಾದಾರ, ವಿ.ಎ. ಹಾದಿಮನಿ, ಮಹೇಶ ಕುರಿಯವರು, ಎಂ.ವೈ. ಜಕ್ಕರಸಾನಿ, ಬಿ.ಎನ್. ಕ್ಯಾತನಗೌಡ್ರ, ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ, ಮಂಜುಳಾ ರೇವಡಿ ಹಾಜರಿದ್ದರು.