

ಚಿಕ್ಕೋಡಿ: ಜೈನ ಧರ್ಮಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಮಕ್ಕಳಿಗೆ ಶಿಣ ನೀಡುವ ಜತೆಗೆ ಧರ್ಮದ ಜಾಗೃತಿ ಮೂಡಿಸಬೇಕು, ಕಾಲಕ್ಕೆ ತಕ್ಕಂತೆ ಮಕ್ಕಳು ಬದಲಾಗಬೇಕು. ಆದರೆ ಸಂಸತಿ, ಆಚಾರ& ವಿಚಾರ ಮರೆಯಬಾರದು ಎಂದು ವಿನಶ್ರೀ ಅಭಿನಂದನ ಪಾಟೀಲ ಹೇಳಿದರು.
ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಭಾನುವಾರ ಪಾವನ ವರ್ಷಾಯೋಗ ನಿಮಿತ್ತ ಬಾಲಾಚಾರ್ಯ ಡಾ.ಸಿದ್ಧಸೇನ ಮುನಿ ಮಹಾರಾಜರ ನೇತೃತ್ವದಲ್ಲಿ ಜರುಗಿದ ರಾಜ್ಯಮಟ್ಟದ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಖಿಲ ಕರ್ನಾಟಕ ಮಹಿಳಾ ಉಪಾಧ್ಯೆ ಚಂದ್ರಕಲಾ ಸೊಲ್ಲಾಪುರೆ ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸತಿ ಕಲಿಸಬೇಕಿದೆ. ಸಿದ್ದ ಸೇನ ಮುನಿಮಹಾರಾಜರು ಅನೇಕ ಯುವಕರನ್ನು ಕುಡಿತದ ಚಟದಿಂದ ಬಿಡಿಸಿದ್ದಾರೆ ಎಂದರು. ಸಿದ್ಧಸೇನ ಮುನಿ ಮಹಾರಾಜರು ಆಶೀರ್ವಚನ ನೀಡಿದರು. ವಿವಿಧ ೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು.
ಡಾ.ಸ್ನೇಹ ಪಾಟೀಲ, ಪ್ರೇರಣಾ ಧೂಳಗೌಡ ಪಾಟೀಲ, ಲಲಿತಾ ಮಗದುಮ್ಮ, ವಿಲಾಸಮತಿ ಪಾಟೀಲ, ಸುರೇಖಾ ಗೌರಗೌಂಡ, ವೈಶಾಲಿ ಬನವಣೆ, ನೀತಾ ಪಾಟೀಲ, ಶಕುಂತಲಾ ಕಾಂತೆ, ಶಕುಂತಲಾ ಹಂಜೆ, ಪದ್ಮಾವತಿ ಖೆಮಲಾಪುರೆ ಇತರರಿದ್ದರು.