

ಲೋಕಾಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದು ಸಿಎಂ ಪಂಚಕಟ್ಟಿಮಠ ಪಿಯು ಕಾಲೇಜು ಪ್ರಾಂಶುಪಾಲ ಐ.ಜಿ. ಧಾರವಾಡಮಠ ಹೇಳಿದರು.
ಪಟ್ಟಣದ ದಾನೇಶ್ವರಿ ಶಿಕ್ಷಣ ಸಂಸ್ಥೆಯ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪಾಲಕರ ಪ್ರಮುಖ ಪಾತ್ರವಾಗಿದೆ. ಪೋಷಕರು-ಶಿಕ್ಷಕರ ಸಭೆಯು ಪೋಷಕರು ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿ, ಸಾಮರ್ಥ್ಯ ಮತ್ತು ಸುಧಾರಣೆಯ ಕ್ಷೇತ್ರಗಳನ್ನು ಆಳವಾಗಿ ನೋಡಲು ಅವಕಾಶ ಒದಗಿಸುತ್ತದೆ ಎಂದು ಸಲಹೆ ನೀಡಿದರು.
ಉಪನ್ಯಾಸಕರಾದ ವಿಠ್ಠಲ ಕೆ.ಎಂ. ಹಾಗೂ ತಿಮ್ಮಾರೆಡ್ಡಿ ಜಿ. ಮಾತನಾಡಿದರು. ಮುಖ್ಯಶಿಕ್ಷಕ ಎಸ್.ಎಂ. ರಾಮದುರ್ಗ ಶಾಲಾ ವರದಿ ವಾಚನ ಮಂಡಿಸಿದರು. ಮಲ್ಲಕಂಬ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 7ನೇ ವರ್ಗದ ವಿದ್ಯಾರ್ಥಿನಿ ನಕ್ಷತ್ರಾ ಗಾಣಗೇರ ಹಾಗೂ ಉದ್ದ ಜಿಗಿತದಲ್ಲಿ ತಾಲೂಕುಮಟ್ಟಕ್ಕೆ ಆಯ್ಕೆಯಾದ 6ನೇ ತರಗತಿಯ ಸಾಗರ ಮಾದರಗೆ ಸನ್ಮಾನಿಸಲಾಯಿತು.
ಶಾಲೆಯಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ರಮೇಶ ಪಂಚಕಟ್ಟಿಮಠ, ಉಪನ್ಯಾಸಕರಾದ ವಿಠ್ಠಲ ಕೆ.ಎಂ., ತಿಮ್ಮಾರೆಡ್ಡಿ ಜಿ., ಪತ್ರಕರ್ತ ಸಲೀಮ ಕೊಪ್ಪದ, ಮುಖ್ಯಶಿಕ್ಷಕ ಎಸ್.ಎಂ. ರಾಮದುರ್ಗ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಚ್.ಅಮೋಜಿ, ವಿ.ಎಚ್. ಜೋಗಿ, ಪಿ.ಎಸ್. ಗಂಗಣ್ಣವರ, ಪಿ.ವಿ. ಚೌವಾಣ, ಎಂ.ಬಿ. ಜೈನರ, ಆರ್.ವೈ. ಬಿಲ್ಕೇರಿ, ಎಂ.ಡಿ. ಹುಗ್ಗಿ, ಆರ್.ಬಿ. ವಾಲ್ಮೀಕಿ, ಎಸ್.ಎಸ್. ಕೃಷ್ಣಗೌಡರ, ಎಮ್.ಎಸ್. ಮಲಾಬಾದಿಮಠ, ಜೆ.ಆರ್. ಮಾಯನ್ನವರ ಇದ್ದರು.