

ಹುಕ್ಕೇರಿ: ಮಕ್ಕಳಲ್ಲಿ ಸಂಸ್ಕಾರ ಮರೆಯಾಗುತ್ತಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಸಮೀಪದ ಕ್ಯಾರಗುಡ್ಡ ಬಳಿ ಇರುವ ವಿದ್ಯಾ ನಗರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಉಪನ್ಯಾಸಕಿ ರೇಖಾ ನೀರಲಗಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಹುಕ್ಕೇರಿ ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಶಾಲಾ ಸಮಿತಿ ಸದಸ್ಯರಾದ ಪ್ರಕಾಶ ಮುತಾಲಿಕ, ಮಲ್ಲಿಕಾರ್ಜುನ ತೇರಣಿ, ರಾಯಪ್ಪ ಗೋಣಿ, ಮುನಾಫ್ ಅತ್ತಾರ, ಸುಹಾಸ ನೂಲಿ, ಉದಯಕುಮಾರ ಹುಕ್ಕೇರಿ, ಲೀಲಾವತಿ ರಜಪೂತ, ಬಸವರಾಜ ನಾಯಿಕ, ಪತ್ರೆಪ್ಪ ಕೊಣ್ಣೂರ, ಪ್ರೋ ಬಸವರಾಜ ವಾಸನ, ಡಾ.ಎಂ.ಎಸ್.ಖರಾಡಿ, ವಿ.ಬಿ.ಪಾಟೀಲ ಇತರರಿದ್ದರು.