ಯೋಗಾಭ್ಯಾಸದಿಂದ ಆರೋಗ್ಯ ಭಾಗ್ಯ

IMG-20250621-WA0109
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳು ಯೋಗಾಭ್ಯಾಸ ಮಾಡಿದರು.
Published on

ಹನಗೋಡು: ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಅಂತರ ರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ ಮಾತನಾಡಿ, ಯೋಗ ಪ್ರಪಂಚಕ್ಕೆ ಭಾರತ ನೀಡಿದ ಕೊಡುಗೆಯಾಗಿದ್ದು, ಯೋಗ ದಿನವನ್ನು ನಮ್ಮ ದೇಶ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲೂ ಆಚರಿಸಲಾಗುತ್ತದೆ. ಯೋಗದಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಬಹುದು, ನಿಯಮಿತವಾಗಿ ಮಾಡುವ ಯೋಗ ಮತ್ತು ವ್ಯಾಯಾಮಗಳು ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಆಗಬಾರದು. ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ಭಾಗ್ಯ ಲಭಿಸಲಿದೆ ಎಂದರು.

ಶಾಲಾ ಶಿಕ್ಷಕರಾದ ಪ್ರೀತಿ, ಪುನೀತ್ ಕುಮಾರ್, ಕೆ.ಆರ್.ಸ್ವಾಮಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೂರ್ಯ ನಮಸ್ಕಾರ, ಮಕರಾಸನ, ಚಕ್ರಾಸನ, ವೃಕ್ಷಾಸನ ಮುಂತಾದ ಯೋಗಾಸನಗಳ ಅಭ್ಯಾಸ ಹಾಗೂ ಪ್ರದರ್ಶನ ಮಾಡಿದರು.

ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಆಚರಣೆ: ನೇರಳಕುಪ್ಪೆಯ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆಯಲ್ಲೂ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಶಾಲೆ ಮುಖ್ಯಶಿಕ್ಷಕ ಹಾಗೂ ಶಿಕ್ಷಕ ಸ್ವಾಮಿ ಮಕ್ಕಳಿಗೆ ವಿವಿಧ ಬಗೆಯ ಯೋಗಾಭ್ಯಾಸ ಮಾಡಿಸಿದರು. ಸಹಶಿಕ್ಷಕರಾದ ದೀಪು, ಶೇಖರ್, ಎಂ.ಪ್ರತಿಭಾ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net