ಮಕ್ಕಳಿಗೆ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ: ಹೊಸದರೋಜಿಯಲ್ಲಿ ಸಂಡೂರು ಬಿಎಚ್‌ಇಒ ಶಿವಪ್ಪ ಹೇಳಿಕೆ

Hosadaroji Pneumococcal Conjugate Vaccine Program
ಸಂಡೂರು ತಾಲೂಕು ಹೊಸದರೋಜಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕಾ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
Published on

ಸಂಡೂರು: ಈವರೆಗೆ ಎರಡು ವರ್ಷದೊಳಗಿನ ಮಕ್ಕಳಿಗೆ 12 ಮಾರಕ ರೋಗಗಳ ಹರಡದಂತೆ ಲಸಿಕೆ ಹಾಕಲಾಗುತ್ತಿತ್ತು. ಇದೀಗ 13ನೇಯದಾಗಿ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ನೀಡಲಾಗುತ್ತಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ (ಬಿಎಚ್‌ಇಒ) ಶಿವಪ್ಪ ತಿಳಿಸಿದರು.

ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ಗುರುವಾರ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ಮಗು ಹುಟ್ಟಿದ ಒಂದೂವರೆ ತಿಂಗಳಿಗೆ ಮೊದಲ, ಮೂರೂವರೆ ತಿಂಗಳಿಗೆ 2ನೇ ಮತ್ತು 9ನೇ ತಿಂಗಳಿಗೆ 3ನೇ ಡೋಸ್ ಹಾಕಲಾಗುವುದು. ಇದು ಮಕ್ಕಳನ್ನು ಬಾಧಿಸುವ ನ್ಯುಮೊನಿಯಾ, ಮೆನಿಂಜೈಟೀಸ್ ಮತ್ತಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ನಿಯಂತ್ರಿಸುವ ಜತೆಗೆ ಮರಣ ಪ್ರಮಾಣ ತಡೆಗಟ್ಟುತ್ತದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದರು. ಗ್ರಾಪಂ ಸದಸ್ಯ ಕಿರಣಕುಮಾರ್ ಮಾತನಾಡಿದರು. ಗ್ರಾಪಂ ಸದಸ್ಯರಾದ ಖಾಜಾಬೀ, ಮಾಯಣ್ಣ, ಮಾರೆಣ್ಣ, ಸಿಎಚ್‌ಒ ರೇಣುಕಾ, ಶಿಕ್ಷಕಿ ಸುಮಂಗಳ, ಆರೋಗ್ಯ ಸುರಕ್ಷಾಧಿಕಾರಿ ಸತ್ಯಮ್ಮ, ಆಶಾ, ಶ್ರೀದೇವಿ, ಹುಸೇನ್‌ಬೀ, ಯಶೋದಾ, ಮಂಗಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net