ಮಕ್ಕಳಿಗೆ ಲಸಿಕೆ ಹಾಕುವುದು ಅಗತ್ಯ

ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಭಾನುವಾರ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರು ನಗರದ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.  ಡಾ. ಎಚ್‌.ಆರ್‌. ತಿಮ್ಮಯ್ಯ, ಡಾ. ದುರ್ಗಾಪ್ರಸಾದ್‌, ಡಾ. ಜಗದೀಶ್‌, ಡಾ. ರಾಜೇಶ್‌ ಇದ್ದರು.
ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಭಾನುವಾರ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರು ನಗರದ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. ಡಾ. ಎಚ್‌.ಆರ್‌. ತಿಮ್ಮಯ್ಯ, ಡಾ. ದುರ್ಗಾಪ್ರಸಾದ್‌, ಡಾ. ಜಗದೀಶ್‌, ಡಾ. ರಾಜೇಶ್‌ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಐವನ್‌ ಡಿಸೋಜಾ ಚಾಲನೆ
ಮಂಗಳೂರು: 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ನಗರದ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರು ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಪೋಲಿಯೊ ಮುಕ್ತ ಆಗಿದ್ದರೂ, ಅದನ್ನು ಮುಂದುವರಿಸಲು ಮಕ್ಕಳಿಗೆ ಲಸಿಕೆ ಹಾಕುವುದು ಅಗತ್ಯ. ಎಲ್ಲ ಪಾಲಕರು ವಿಶೇಷ ಕಾಳಜಿ ವಹಿಸಿ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾ˜ಕಾರಿ ಡಾ. ಎಚ್‌.ಆರ್‌. ತಿಮ್ಮಯ್ಯ, ಲೇಡಿಗೋಷನ್‌ ಅ˜ಕ್ಷಕ ಡಾ. ದುರ್ಗಾಪ್ರಸಾದ್‌, ಆಸ್ಪತ್ರೆಯ ಆರ್‌ಎಂಒ ಡಾ. ಜಗದೀಶ್‌, ಜಿಲ್ಲಾ ಆರ್‌ಸಿಎಚ್‌ ಅ˜ಕಾರಿ ಡಾ. ರಾಜೇಶ್‌ ಮತ್ತಿತರರು ಇದ್ದರು.

ಪಲ್ಸ್‌ ಪೋಲಿಯೋ ದ.ಕ. ಜಿಲ್ಲೆ ಶೇ. 97.2 ದಾಖಲು

ಮಂಗಳೂರು: ಭಾನುವಾರ ನಡೆದ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯಲ್ಲಿ 1,40,677 ಗುರಿ ನೀಡಲಾಗಿದ್ದು, ಅದರಲ್ಲಿ 1,36,717 (ಶೇ. 97.2) ಮಕ್ಕಳಿಗೆ ಲಸಿಕೆ ನೀಡಿ ಗುರಿ ಸಾ˜ಸಲಾಗಿದೆ. ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಗುರಿ ಮೀರಿದ ಸಾಧನೆಯಾಗಿದೆ.
ಬಂಟ್ವಾಳ ತಾಲೂಕಿನಲ್ಲಿ 29,366 ಗುರಿ ನಿಗದಿಪಡಿಸಲಾಗಿದ್ದು, 28,427 (ಶೇ. 96.8) ಸಾ˜ಸಲಾಗಿದೆ. ಅದೇ ರೀತಿ ಬೆಳ್ತಂಗಡಿ ತಾ.ನಲ್ಲಿ 17,487 ಗುರಿಯಲ್ಲಿ 18,080 (103.4), ಮಂಗಳೂರು ತಾ. 66,320 ಗುರಿಯಲ್ಲಿ 61,738 (93.1), ಪುತ್ತೂರು 19,266 ಗುರಿಯಲ್ಲಿ 19,725 (102.4) ಮತ್ತು ಸುಳ್ಯ ತಾ.ನಲ್ಲಿ 8,238 ಗುರಿಯಲ್ಲಿ 8,747 (106.2)ಸಾಧನೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net