ಮಕ್ಕಳಿಗೆ ಕಾನೂನಿನ ಅರಿವು ಅಗತ್ಯ

D.9-MDG-1P1
Published on

ಮೂಡಿಗೆರೆ: ನ್ಯಾಯಾಲಯ ವಿದ್ಯಾರ್ಥಿಗಳಿಗೆ ಕಲಾಪ ವೀಕ್ಷಿಸುವ ಅವಕಾಶ ಕಲ್ಪಿಸಿ ಕೊಟ್ಟದ್ದು, ಶೈಕ್ಷಣಿಕ ಪ್ರವಾಸದ ವೇಳೆ ಕಲಾಪ ವೀಕ್ಷಿಸಿದರೆ ಮಕ್ಕಳಿಗೂ ಕಾನೂನಿನ ಅರಿವು ಮೂಡಲಿದೆ ಎಂದು ವಕೀಲರಾದ ಭಾಗ್ಯನಾರಾಯಣ ಹೇಳಿದರು.

ದಾರದಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಎಂಪಿಎಂ ಟ್ರಸ್ಟ್ ನಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ಕಾನೂನು ಅರಿವು ಕಾರ್ಯಕ್ರಮ ಮತ್ತು ಅಂದವಾದ ಬರಹ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಪೋಕ್ಸೋ ಕಾಯ್ದೆ ಜಾರಿಗೊಳಿಸಿದೆ. ಇಂತಹ ಕಠಿಣ ಕಾನೂನಿನಿಂದ ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ ಎಂದು ಹೇಳಿದರು.

ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಜಾರಿಗೊಳಿಸಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಟೂಲ್ ಫ್ರೀ ಸಂಖ್ಯೆ 112ಕ್ಕೆ ಕರೆ ಮಾಡಿದರೆ ಕ್ಷಣ ಮಾತ್ರದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತರನ್ನು ರಕ್ಷಿಸುತ್ತಾರೆ. ಅಥವಾ ಪಾಲಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು. ಸ್ವಾಭಿಮಾನಕ್ಕೆ ಅಂಜಿ ದೂರು ನೀಡಲು ಹಿಂಜರಿದರೆ ದೌರ್ಜನ್ಯಕ್ಕೆ ಪ್ರೇರೇಪಣೆ ನೀಡಿದಂತಾಗುತ್ತದೆ. ಇಂತಹ ಸೂಕ್ಷ್ಮ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿದ ಬಳಿಕ ಅಪರಾಧಿ ಕಾನೂನಿನ ಕುಣಿಕೆಗೆ ಬೀಳಲಿದ್ದಾರೆ. ಇದರಿಂದ ಅಪರಾಧಿಗಳು ಪಾಠ ಕಲಿಯಲಿದ್ದಾರೆ. ಅಮಾಯಕ ಮಹಿಳೆಯರು ಮತ್ತು ಮಕ್ಕಳ ತಂಟೆಗೆ ಹೋಗದಂತೆ ಕಠಿಣ ಕಾಯ್ದೆಗಳು ದುಷ್ಕರ್ಮಿಗಳಿಗೆ ಲಗಾಮು ಹಾಕಲಿದೆ ಎಂದು ಮಾಹಿತಿ ನೀಡಿದರು.

ವಿಎಂಪಿಎಂ ಟ್ರಸ್ಟ್ ಅಧ್ಯಕ್ಷ ಪಿ.ಪಿ.ನಾರಾಯಣ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ಸಾಹಿತಿ ಎಂ.ಎಸ್.ನಾಗರಾಜ್, ಗ್ರಾಪಂ ಸದಸ್ಯರಾದ ಸಾಧನಾ ಮನಿಸ್, ವಿಕ್ರಂ, ಕೆ.ಎಂ.ಸಿದ್ದೇಸ್, ಶಿಕ್ಷಕರಾದ ಲಾವಣ್ಯ, ಪ್ರೇಮಾ, ದೀಪಿಕಾ, ಮುಖಂಡರಾದ ನವೀನ್ ಕುಮಾರ್, ಪೂರ್ಣೇಸ್ ಗೌಡ, ವೆಂಕಟೇಶ್, ಡಿ.ಜಿ.ರಂಜಿತ್, ರಾಜೇಸ್, ಕಲಾವತಿ, ಕೆ.ಎಸ್.ರಂಜಿತ್, ಮೈನಾ, ವಿನಂತಿ, ಪೂರ್ವಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net