ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯ

makkala dinacharane
Published on

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ವಿಜೃಂಭಣೆಯಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಮಕ್ಕಳು ಕೃಷ್ಣ, ರಾಧೆ, ಆಂಜನೇಯ, ಪೊಲೀಸ್, ಸೈನಿಕ, ಭಾರತಾಂಬೆ, ಮಹಾತ್ಮ ಗಾಂಧೀಜಿ, ನೆಹರು, ಕಿತ್ತೂರ್ ರಾಣಿ ಚೆನ್ನಮ್ಮ, ಟೊಮೊಟೊ, ಸ್ಟ್ರಾಬೆರಿ, ಸೇಬು, ವಿವೇಕಾನಂದ, ರೈತ, ಪೂಜಾರಿ, ಏಂಜಲ್, ಛದ್ಮವೇಷ ರೂಪಧಾರಿಗಳಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಶುಭ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಾತನಾಡಿ, ಮಕ್ಕಳ ವೇಷಭೂಷಣಗಳು ನಮ್ಮ ಸಂಸ್ಕೃತಿ, ಇತಿಹಾಸ, ಪುರಾಣವನ್ನು ನೆನಪಿಸುತ್ತದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಹಿರಿಯರ ತತ್ವ, ಆದರ್ಶಗಳು, ಉಳಿದು ಮುಂದಿನ ಪ್ರಜೆಗಳಾದ ಮಕ್ಕಳು ಉತ್ತಮ ಪ್ರಜೆಗಳಾಗಬಲ್ಲರು. ಎಲ್ಲ ಮಕ್ಕಳು ವಿಶ್ವಮಾನವರಾಗಿರುತ್ತಾರೆ. ಆದರೆ, ಆ ಮಕ್ಕಳಿಗೆ ಧೈರ್ಯ ತುಂಬಿ ಸರಿಯಾದ ಮಾರ್ಗದರ್ಶನ ನೀಡಬೇಕಾಗುತ್ತದೆ. ಚಿಕ್ಕಂದಿನಿಂದ ತೇನ್‌ಸಿಂಗ್ ಕಂಡ ಕನಸನ್ನು ಜೀವನದಲ್ಲಿ ಸಾಧಿಸಿದ್ದನ್ನು ಉದಾರಣೆ ನೀಡಿದರು. ಮಕ್ಕಳ ಗುರಿ ಸಾಧನೆಗೆ ಸರಿಯಾದ ಮಾರ್ಗದರ್ಶಕರಾಗಿ ಪೋಷಕರು ಶಿಕ್ಷಕರು ದಾರಿದೀಪವಾಗಬೇಕೆಂದು ತಿಳಿಸಿದರು.

ಮೇಲ್ವಿಚಾರಕಿ ಪ್ರಭಾರ ಸಾಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾದಂಡ ಸವಿತಾ ಕೀರ್ತನ್ ಮಾತನಾಡಿ, ಮಕ್ಕಳ ದಿನಾಚರಣೆ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷಿತ ಆರೈಕೆ, ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು. ವಿನೂತನವಾಗಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆ ಅನಿಲ, ಸಹಾಯಕಿ ಹೇಮಲತಾ ಅವರು ಮಕ್ಕಳ ಹೆಸರಿನಲ್ಲಿ ತರಕಾರಿ ಪಾಟ್‌ಗಳು, ಮಾಡುವುದರ ಮೂಲಕ ಮಕ್ಕಳಲ್ಲಿ ರಾಸಾಯನಿಕ ಮುಕ್ತ ಆಹಾರ ಸೇವನೆಯ ಬಗ್ಗೆ ಅರಿವು ಮೂಡಿಸಿದರು.

ಗಂಗಾ ಅಮೃತಸ್ಥಾನ ಎಸ್ಟೇಟ್ ಮಾಲೀಕರು ಎಲ್ಲಾ ಚದ್ನವೇಶಧಾರಿಗಳಿಗೆ ಬಹುಮಾನವನ್ನು ನೀಡಿದರು. ಕಲ್ಮೇಶ್ ಸಮುದಾಯ ಆರೋಗ್ಯ ಅಧಿಕಾರಿ ಅವರಿಂದ ಹಾಜರಿದ್ದ ಎಲ್ಲಾ ಮಹಿಳೆಯರಿಗೆ ಮತ್ತು ಮರಗೋಡು ವೃತ್ತದ ಸಹಾಯಕಿಯರಿಗೆ ಆರೋಗ್ಯ ತಪಾಸಣೆ ಬಿಪಿ, ಶುಗರ್, ಪರಿಶೀಲನೆ ನೆರವೇರಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷ ಪ್ರತಿಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಮುಖರಾದ ಜೋಯಪ್ಪ, ಇನ್ನರ್ ವ್ಯಾಲಿ ಸಂಸ್ಥೆಯ ಸದಸ್ಯೆ ಶಮ್ಮಿಪ್ರಭು, ಕುಂಜಪ್ಪ ರತಿ, ಪುಟ್ಲಪ್ಪಪೈಸಾರಿ ಅಂಗನವಾಡಿ ಕಾರ್ಯಕರ್ತೆ ಪುಷ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net