

ಪಾತಪಾಳ್ಯ: ವಿದ್ಯಾರ್ಥಿಗಳು ತಮ್ಮ ಓದಿನ ಜತೆಗೆ ಹಕ್ಕು ಮತ್ತು ಕಾನೂನು ಅರಿಯುವುದು ಅಗತ್ಯವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಡಿ.ಕೆ.ಮಂಜುನಾಥ ಆಚಾರಿ ತಿಳಿಸಿದರು.
ಪಾತಪಾಳ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲೂಕು ಸೇವಾ ಸಮಿತಿ ಬಾಗೇಪಲ್ಲಿ, ವಕೀಲ ಸಂ ಬಾಗೇಪಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು, ತಾಲೂಕು ಪಂಚಾಯತಿ ಇವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಕಾನೂನು ಉಲ್ಲಂನೆ ಮತ್ತು ಅಶಾಂತಿ ಉಂಟಾದಾಗ ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು. ಎಲ್ಲರಿಗೂ ಉಚಿತ ಕಾನೂನು ನೆರವು ನೀಡಬೇಕು ಎಂಬುದು ಧ್ಯೇಯೋದ್ದೇಶವಾಗಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕು. ಉತ್ತಮ ವಿದ್ಯೆ ಕಲಿತು ಮನೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಬಾಲ್ಯದಲ್ಲಿ ಮಕ್ಕಳನ್ನು ಸಾಕಿ&ಸಲುಕಿ ಪೋಷಣೆ ಮಾಡುವುದು ತಂದೆ&ತಾಯಿ ಕರ್ತವ್ಯ. ಹಾಗೇ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.
ಪಿಎಸ್ಐ ಸೈಯದ್ ಅನ್ಸರ್ ಮಾತನಾಡಿ, ಬಹುತೇಕರಲ್ಲಿ ಕಾನೂನು ಬಗ್ಗೆ ಸಮರ್ಪಕ ಮಾಹಿತಿ ಇಲ್ಲದಿರುವುದರಿಂದ ಅವಡಗಳು ನಡೆಯುತ್ತವೆ. ಹಾಗಾಗಿ ಕಾನೂನು ಅರಿವು ಹೊಂದಿರಬೇಕು ಎಂದರು.