ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಅಗತ್ಯ

FotoJet
Published on

ತುಮಕೂರು :  ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪಾಲಕರು, ಕಾಲೇಜಿನಲ್ಲಿ ಉಪನ್ಯಾಸಕರು ಸರಿಯಾದ ಮಾರ್ಗದರ್ಶನ ಮಾಡುವುದರ ಮೂಲಕ ಅವರಲ್ಲಿ ಒಳ್ಳೆಯ ಗುಣಗಳು ಮೇಳೈಸುವಂತೆ ಮಾಡಬೇಕಿದೆ. ಆ ಮೂಲಕ ಉತ್ತಮ ಸಮಾಜ, ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ತಹಸೀಲ್ದಾರ್​ ಎಂ.ಮಮತಾ ತಿಳಿಸಿದರು.

ನಗರದ ಅಕ್ಷಯ ಪಾಲಿಟೆಕ್ನಿಕ್​ ಕಾಲೇಜು ಆಯೋಜಿಸಿದ್ದ ಅಕ್ಷಯ ಸಂಸತಿ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಲ್ಲಿ ಮೊಬೈಲ್​ ಗೀಳು ಹೆಚ್ಚಾಗಿದ್ದು, ದಿನದ ಬಹುಪಾಲು ಸಮಯವನ್ನು ಮೊಬೈಲ್​ಗಳಲ್ಲಿ ತಲ್ಲೀನರಾಗಿ ಕಾಲ ಕಳೆಯುತ್ತಾರೆ. ಯಾರು ಸಾಧನೆ ಮಾರ್ಗದಲ್ಲಿ ಕಠಿಣ ಪರಿಶ್ರಮದಿಂದ ಹೆಜ್ಜೆ ಇಡುತ್ತಾರೋ ಅವರು ಸಾಧನೆಯ ಉತ್ತುಂಗದ ಗುರಿ ಮುಟ್ಟುತ್ತಾರೆ ಎಂದರು.

ಸಂಶೋಧನಾ ವಿದ್ವಾಂಸರಾದ ಡಾ.ಗಂಗಾಧರ್​ ಕೊಡ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಅಧ್ಯಯನ ಮಾಡುವುದರಿಂದ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಯಜಾಕಿ ಇಂಡಿಯಾ ಕಂಪನಿ ಉಪವ್ಯವಸ್ಥಾಪಕ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪಸ್​ ಸಂದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಗಿದ್ದಾರೆ ಎಂದರು. ಅಕ್ಷಯ ಇಂಜಿನಿಯರಿಂಗ್​ ಕಾಲೇಜಿನ ಪ್ರಾಂಶುಪಾಲ ಡಾ.ಎಲ್​.ಯತೀಶ್​, ಪಾಲಿಟೆಕ್ನಿಕನ ಪ್ರಾಂಶುಪಾಲ ಲೋಹಿತೇಶ್​ ಜಗಕುಮಾರ್​, ಭೋದಕ- ಭೋದಕೇತರ ಸಿಬ್ಬಂದಿ ವರ್ಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net