ಮಕ್ಕಳಿಗೆ ಹಣಕಾಸಿನ ಅರಿವು ಅಗತ್ಯ

2Kagavad1
Published on

ಬೆಳಗಾವಿ: ನಗರದ ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ಬಿಬಿಎ ಮಹಾವಿದ್ಯಾಲಯ, ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಬೆಳಗಾವಿಯ ಆರ್‌ಸಿಯು ಮತ್ತು ಬೆಂಗಳೂರಿನ ಮೆಂಟರ್ಸ್ ಫಾರ್ ಕಿಡ್ಸ್ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಣಕಾಸಿನ ಅರಿವು-ವಾಣಿಜ್ಯ ವಿದ್ಯಾರ್ಥಿಗಳ ಭವಿಷ್ಯದ ಸಂಪತ್ತು ಎಂಬ ವಿಷಯದ ಉಪನ್ಯಾಸ ಜರುಗಿತು.

ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಬಿ.ಎಸ್.ನಾವಿ, ಮೆಂಟಲ್ ಫಾರ್ ಕಿಡ್ಸ್‌ನ ಸಂಯೋಜಕಿ ಡಾ.ಪೂರ್ಣಿಮಾ ಜೋಗಿ, ಲೀಡ್ ಇನ್‌ಸ್ಟ್ಟಿಟ್ಯೂಷನಲ್ ಪಾರ್ಟ್‌ನರ್‌ಶಿಪ್‌ನ ಅಪರ್ಣಾ ಭಟ್ ಮಾತನಾಡಿ, ವಾಣಿಜ್ಯ ಕ್ಷೇತ್ರದಲ್ಲಿ ಯುವಕರು ಹೊಂದಬೇಕಾದ ಪ್ರಾಯೋಗಿಕ ಅರಿವು, ಹಣಕಾಸು ನಿರ್ವಹಣೆಯ ಪ್ರಾಮುಖ್ಯತೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಪ್ರಾಚಾರ್ಯ ರವಿ ದಂಡಗಿ, ಉಪಪ್ರಾಂಶುಪಾಲ ಡಾ.ಭರತ ಅಲಸಂದಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ನಿರ್ಮಲಾ ಗಡಾದ, ಪ್ರಾಚಾರ್ಯ ಶ್ವೇತಾ ಪೆಟ್ರೋಟಿ, ಆರ್‌ಸಿಯು ಸಹಾಯಕ ಪ್ರಾಧ್ಯಾಪಕ ಡಾ.ಶಿವಲಿಂಗಯ್ಯ ಗೋತೆ, ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಶೋಧನಾ ಸಹಾಯಕ ಯಲ್ಲಪ್ಪ ಮೂಡಲಗಿ ಇತರರಿದ್ದರು. ನಾಗವೇಣಿ ಧರೆನ್ನವರ ಸ್ವಾಗತಿಸಿದರು. ಪೂನಂ ಪಾಟೀಲ ಪರಿಚಯಿಸಿದರು. ಲಕ್ಷ್ಮೀ ಚೌಧರಿ ನಿರೂಪಿಸಿದರು. ಬಿ.ಎಸ್.ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net