ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಅಗತ್ಯ

6Rayabag1
Published on

ರಾಯಬಾಗ: ಉತ್ತಮ ಸಮಾಜ ನಿರ್ಮಾಣ ಮತ್ತು ಸುಭದ್ರ ದೇಶ ಕಟ್ಟುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ಮಹಾವೀರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಯಬಾಗ ತಾಲೂಕು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಽಸಲು ಎಲ್ಲ ಶಿಕ್ಷಕರ ಪ್ರಯತ್ನ ಮುಖ್ಯವಾಗಿದೆ. ಮಕ್ಕಳಿಗೆ ಒಳ್ಳೆ ಶಿಕ್ಷಣದ ಜತೆ ಸಂಸ್ಕಾರ ನೀಡಬೇಕು ಎಂದು ಕರೆ ನೀಡಿದರು.

ಚಿಕ್ಕೋಡಿ ಡಿಡಿಪಿಯು ಸೀತಾರಾಮು ಆರ್.ಎಸ್. ಮಾತನಾಡಿದರು. ಬಿಇಒ ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಳಕವಾಟ ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಪಪಂ ಅಧ್ಯಕ್ಷ ಅಶೋಕ ಅಂಗಡಿ, ತಹಸೀಲ್ದಾರ್ ಸುರೇಶ ಮುಂಜೆ, ತಾಪಂ ಇಒ ಡಾ.ಸುರೇಶ ಕದ್ದು, ಪಪಂ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಬಿಆರ್‌ಸಿ ಬಸವರಾಜ ಕಾಂಬಳೆ, ಬಿಸಿಯೂಟ ಅಧಿಕಾರಿ ಕುಮಾರ ಮಾದರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಪಿ.ಜೀರಗ್ಯಾಳ, ಕರೆಪ್ಪ ನಾಯಿಕ, ಜಿನೇಂದ್ರ ನಿಲಜಗಿ, ಎಂ.ಬಿ.ಕಂಬಾರ, ವಿ.ಎನ್.ತೇರದಾಳೆ, ಪಿ.ಎಸ್.ಶಾರಬಿದ್ರೆ, ಎಂ.ಎಸ್.ಪೂಜೇರಿ, ಬಿ.ಬಿ.ಬನಶಂಕರಿ, ದಿಲೀಪ ಹಾರೂಗೇರಿ, ವಿ.ಬಿ.ಅರಗೆ, ಬಿ.ಎಂ.ಮಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net