ಮಕ್ಕಳಿಗೆ ಅಗತ್ಯವಿದೆ ಸಂಸ್ಕಾರ

h8-omnagara
Published on

ಹುಬ್ಬಳ್ಳಿ: ಓಂನಗರ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿಯ ಉಣಕಲ್‌ನ ಓಂನಗರದಲ್ಲಿನ ಆರ್.ಕೆ. ಕೊಕಾಟೆ ಶಾಲೆಯಲ್ಲಿ ಬೇಸಿಗೆ ಶಿಬಿರ ಚೈತ್ರದ ಚಿಗುರು ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಉದ್ಯಮಿ ರಮೇಶ ಮಹಾದೇವಪ್ಪನವರ ಮಾತನಾಡಿ, ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ನೀಡುವ ಅಗತ್ಯವಿದೆ. ಬೇಸಿಗೆ ಶಿಬಿರ ಮೂಲಕ ಇಂಥ ಸಂಸ್ಕಾರ ಸಿಗುತ್ತಿರುವುದು ಉತ್ತಮ ಬೆಳವಣಿಗೆ. ವಿವಿಧ ಭಾಗಗಳಿಂದ ಆಗಮಿಸಿದ್ದ ಹತ್ತಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು, ಯೋಗ, ಶಿಸ್ತು, ಸುಗಮ ಸಂಗೀತ, ಕರಕುಶಲ ಕಲೆ, ಭಾಷಣ/ ವರದಿ ವಾಚನ, ಪರಿಸರ ಸಂರಕ್ಷಣೆ, ನೃತ್ಯ, ಆಂಗ್ಲ ಭಾಷಾ ಕಲಿಕೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ, ಮೊದಲಾದ ಅಮೂಲ್ಯ ಸಂಗತಿಗಳನ್ನು ಮಕ್ಕಳಿಗೆ ಕಲಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷರಾದ ಜಿ.ಎಸ್. ಪಾಟೀಲ, ಜಿ.ಎಲ್. ಸತ್ತೆನ್ನವರ ಮಾತನಾಡಿ, ಬೇಸಿಗೆ ಶಿಬಿರದ ಕಲಾಪಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಪಾಲಕರಿಗೆ ಕಿವಿಮಾತುಗಳನ್ನು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಯಿತು. ವಿಶಿಷ್ಟ ಕರತಾಡನದ ಮೂಲಕ ಮಕ್ಕಳು ತಮ್ಮ ಗುರುಗಳಿಗೆ ವಿಶೇಷ ನಮನ ಸಲ್ಲಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಬಿರದ ಅವಧಿಯಲ್ಲಿ ಮಕ್ಕಳು ತಯಾರಿಸಿದ ವಿವಿಧ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಪ್ರೊ.ಎಂ.ಬಿ. ಕಂಬಳಿ, ಬಿ.ಎಸ್. ಸಾತಣ್ಣವರ, ಡಾ.ಎಸ್.ಎ. ಮೊಳೆಗಾಂವ, ಶಿವಕುಮಾರ ಗೌಡ, ಶ್ರೀಕಾಂತ ಹಾವನೂರ ಮತ್ತು ಡಾ. ಚೇತನ್ ಗಂಟೆಪ್ಪನವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net