ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ

VIDHYABHARATI PHOTOO (1)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದೆ ಇದ್ದ ಗುರುಕುಲ ಮಾದರಿ ಶಿಕ್ಷಣದಂತೆ ಇಂದು ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಸಿಗಬೇಕಿದೆ. ವಿದ್ಯಾಭಾರತಿ ಈ ದಿಸೆಯಲ್ಲಿ ಶಿಕ್ಷಕರಿಗೆ ಪ್ರಶಿಕ್ಷಣ ನೀಡಿ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಬೆಳೆಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್​. ಪಾಟೀಲ ಹೇಳಿದರು.
ನಗರದ ಆದರ್ಶ ಪ್ರೌಢ ಶಾಲೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರಾಂತ ಸಾಧಾರಣ ಸಭಾ ಬೈಠಕ್​ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾಭಾರತಿ ಪ್ರಾಂತ ಉಪಾಧ್ಯಕ್ಷೆ ಪಾರ್ವತಿ ಉಪನ್ಯಾಸ ನೀಡಿದರು. ವಿದ್ಯಾಭಾರತಿ ಕರ್ನಾಟಕ ವೆಬ್​ಸೈಟ್​ ಅನ್ನು ವಿದ್ಯಾಭಾರತಿ ಹಿರಿಯ ಉಪನ್ಯಾಸಕ ನರಸಿಂಹ ಗಲಗಲಿ ಲೋಕಾರ್ಪಣೆ ಮಾಡಿದರು. ವಿನ್ಯಾಸಕಾರ ಸಿದ್ದೇಶಕುಮಾರ ವೆಬ್​ಸೈಟ್​ ಮಾಹಿತಿ ನೀಡಿದರು.
ಲಕ್ಷ್ಮಣರಾವ ಮಾತನಾಡಿ, ವಿದ್ಯಾಭಾರತಿ ಕಾರ್ಯವನ್ನು ಪ್ರತಿ ಜಿಲ್ಲೆಗಳಿಗೆ ಯಶಸ್ವಿಯಾಗಿ ತಲುಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಾರ್ಯದ ವಿಸ್ತಾರ ಹಾಗೂ ಕಾರ್ಯಕರ್ತರ ಸಬಲೀಕರಣಕ್ಕೆ ಪ್ರವಾಸ ಮಾಡಿ ಪ್ರತಿ ತಾಲೂಕಿನಲ್ಲಿ ಸಂಘಟನೆ ಕೆಲಸವನ್ನು ಸದೃಢಗೊಳಿಸೋಣ. ವಿದ್ಯಾಲಯ ಗುಣಮಟ್ಟದ ವಿಷಯವಾಗಿ ಗಮನಹರಿಸೋಣ ಎಂದರು.
ಪರಮೇಶ್ವರ ಹೆಗಡೆ ಮಾತನಾಡಿ, ಶಿಕ್ಷಕರು ಅಂಧಾನುಕರಣೆ ಬಿಟ್ಟು ವೈಜ್ಞಾನಿಕ ಭಾವ ಅಳವಡಿಸಿಕೊಳ್ಳಬೇಕು. ಮೆಕಾಲೆ ಶಿಕ್ಷಣ ಬದಿಗಿಟ್ಟು ಎಂಥಹ ಶಿಕ್ಷಣ ಕೊಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮರ್ಪಕ ಅನುಷ್ಠಾನ ಆಗಿಲ್ಲ. ಪ್ರಸ್ತುತ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದೆ. ಈ ಕುರಿತು ತಾರ್ಕಿಕ ಚಿಂತನೆ ಅಗತ್ಯ ಎಂದರು.
ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶಕುಮಾರ, ಕಾರ್ಯದರ್ಶಿ ವಸಂತ ಮಾಧವ, ಜಿಲ್ಲಾ ಅಧ್ಯಕ್ಪ ಶಾಂತಣ್ಣ ಕಡಿವಾಳ, ಕಾರ್ಯದರ್ಶಿ ಅಶೋಕ ನಾಯಕ, ಸುಹಾಸ ಆನೆಗುಂದಿ, 150ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net