ಮಕ್ಕಳು ಆಧುನಿಕ ತಂತ್ರಜ್ಞಾನ ಮೈಗೂಡಿಸಿಕೊಳ್ಳಲಿ: ಕುಡಾ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ್ ಸಲಹೆ

110122 Alwandi Inaugurate the smart class in school
ಮೈನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ್ ಉದ್ಘಾಟಿಸಿದರು.
Published on

ಅಳವಂಡಿ: ಮಕ್ಕಳು ಆಧುನಿಕತೆಯ ತಂತ್ರಜ್ಞಾನ ಅಳವಡಿಸಿಕೊಂಡು ಶಿಕ್ಷಣ ಪಡೆಯಬೇಕು ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ್ ಹೇಳಿದರು.

ಸಮೀಪದ ಮೈನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಏರ್ಪಡಿಸಿದ್ದ ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಬಳಸಿಕೊಂಡು ಪಾಠ ಮಾಡುವಂತಾಗಬೇಕು. ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ತಂತ್ರಜ್ಞಾನದ ಅತ್ಯವಶ್ಯವಿದೆ.ಅವುಗಳನ್ನು ಬಳಸಿಕೊಂಡು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಆಗಬೇಕು ಎಂದರು. ಸಂಘದ ನಿರ್ದೇಶಕ ವಿ.ಎಂ.ಭೂಸನೂರಮಠ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಸಕ್ರಡ್ಡಿ ಹ್ಯಾಟಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಎಲ್.ಹಿರೇಗೌಡ್ರ , ಎಸ್ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಪೂಜಾರ್, ಸಂಯೋಜಕ ಶರಣಪ್ಪ ಸಿಂದೋಗಿ, ವಿನೂತನ ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ರೋಟರಿ ಕ್ಲಬ್ ಅಧ್ಯಕ್ಷ ಅಮರೇಶ ಪಾಟೀಲ್, ಯೋಜನಾ ನಿರ್ದೇಶಕಿ ಕವಿತಾ ಹಿರೇಮಠ, ಗ್ರಾಪಂ ಸದಸ್ಯರಾದ ಮರಿಶಾಂತವೀರ ಚಕ್ಕಡಿ, ಈರಣ್ಣ ಮೂಲಿಮನಿ, ಸುಶೀಲಮ್ಮ ಕೊಪ್ಪಳ, ಹನುಮವ್ವ ಪೂಜಾರ, ಎಸ್ಡಿಎಂಸಿ ಸದಸ್ಯರಾದ ಮಹೇಂದ್ರಗೌಡ ಕುರುಡಗಿ, ನಾಗರೆಡ್ಡಿ ಡಂಬ್ರಳ್ಳಿ, ಉಮೇಶ ಗುಡದಣ್ಣವರ, ಈರಮ್ಮ ಕುಂಬಾರ್, ರೇಣುಕಾ ಕತ್ತಿ , ಸಿದ್ದರೆಡ್ಡಿ ಡಂಬ್ರಳ್ಳಿ, ಪ್ರಭುಗೌಡ ಮೈನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net