ಮಕ್ಕಳು ಆರಂಭಿಕ ಹಂತದಲ್ಲೇ ಪ್ರಗತಿ ಸಾಧಿಸಿ

ಹಗರಿಬೊಮ್ಮನಹಳ್ಳಿಯ ಸೋನಿಯಾ ನಗರದ ಸಕಿಪ್ರಾ ಶಾಲೆ ವಿದ್ಯಾರ್ಥಿಗಳಿಗೆ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಪೆನ್ನು, ನೋಟ್‌ಪುಸ್ತಕ ಹಾಗೂ ಇತರೆ ಸಾಮಗ್ರಿಗಳನ್ನು ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಮರಿರಾಮಪ್ಪ, ಬಿಇಒ ಮೈಲೇಶ್ ಬೇವೂರ್, ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ, ಪ್ರಮುಖರಾದ ಎಲ್.ಕೃಷ್ಣ ನಾಯ್ಕ, ಮೀಠ್ಯಾನಾಯ್ಕ, ಟಿ.ಮಾರುತಿ, ಬಿ.ರಾಮಣ್ಣ, ಚಾರಿದುರ್ಗಪ್ಪ, ಎಚ್.ಕೊಟ್ರಪ್ಪ, ಬಿ.ಆರ್.ಪಿ.ಯ ಪರಮೇಶ್ವರ ಸೊಪ್ಪಿಮಠ, ಗೋಣಿಬಸಪ್ಪ ಇತರರಿದ್ದರು.

Published on

ಹಗರಿಬೊಮ್ಮನಹಳ್ಳಿ: ಮಕ್ಕಳು ಆರಂಭದ ಕಲಿಕೆಯಲ್ಲಿಯೇ ಪ್ರಗತಿ ಸಾಧಿಸಬೇಕು ಎಂದು ಪುರಸಭೆ ಅಧ್ಯಕ್ಷ ಮರಿರಾಮಪ್ಪ ಹೇಳಿದರು.

ಪಟ್ಟಣದ ಸೋನಿಯಾ ನಗರದಲ್ಲಿನ ಸಕಿಪ್ರಾ ಶಾಲೆ ವಿದ್ಯಾರ್ಥಿಗಳಿಗೆ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಶನಿವಾರ ಪೆನ್ನು, ನೋಟ್‌ಪುಸ್ತಕ ಹಾಗೂ ಇತರೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ಬಿಇಒ ಮೈಲೇಶ್ ಬೇವೂರ್ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಕಲಿಕೆಗೆ ಪ್ರಾಥಮಿಕ ಶಿಕ್ಷಣ ಪೂರಕವಾಗಿದ್ದು, ಉತ್ತಮ ಫಲಿತಾಂಶದೊಂದಿಗೆ ಸಾಧನೆಯತ್ತ ಸಾಗಿ ಎಂದು ತಿಳಿಸಿದರು.

ಶಿಕ್ಷಕ ಕೆ.ಹುಸೇನ್ ಸಾಬ್, ಬಿಸಿಯೂಟ ಅಧಿಕಾರಿ ರಾಜಕುಮಾರ ನಾಯ್ಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ತಾಲೂಕು ಕಾರ್ಯದರ್ಶಿ ಟಿ.ಸೋಮಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net